ಕಾರ್ಕಳ : ಪಾದಚಾರಿಯ ಅವಸರದ ಪರಿಣಾಮವಾಗಿ ಕಾರೊಂದು ಚರಂಡಿಗೆ ಬಿದ್ದ ಘಟನೆ ಡಿ.25ರ ಸಂಜೆ 4 ಗಂಟೆಗೆ ನಿಟ್ಟೆ ಇಂಜಿನಿಯರಿಂಗ್ ಕಾಲೇಜು ಸಮೀಪ ಸಂಭವಿಸಿದೆ. ಕಿನ್ನಿಗೋಳಿಯ ಕುಟುಂಬವೊಂದು ಕಾರ್ಕಳದಿಂದ ಬೆಳ್ಮಣ್ ಕಡೆಗೆ ಸಾಗುತ್ತಿದ್ದ ವೇಳೆ ಪಾದಚಾರಿಯೊಬ್ಬರು ಅವಸರದಿಂದ ರಸ್ತೆ ದಾಟುತ್ತಿದ್ದು, ಗೊಂದಲಕ್ಕೆ ಈಡಾದ ಚಾಲಕ ಅಪಘಾತ ತಪ್ಪಿಸಲು ಮುಂದಾಗಿ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ಚರಂಡಿಗೆ ಬಿದ್ದಿದೆ. ವಾಹನದಲ್ಲಿದ್ದವರಿಗೆ ಗಾಯಗಳಾಗಿದ್ದು, ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ನಿಟ್ಟೆ : ಪಾದಚಾರಿಯ ಅವಸರದಿಂದ ಕಾರು ಚರಂಡಿಗೆ






























































