ಕಾರ್ಕಳ ಶ್ರೀ ವೆಂಕಟರಮಣ ದೇವರ ಲಕ್ಷ ದೀಪೋತ್ಸವ ಸಂಪನ್ನ

ಕಾರ್ಕಳ : ಪಡುತಿರುಪತಿ ಖ್ಯಾತಿಯ ಚಪ್ಪರ ಶ್ರೀ ಶ್ರೀನಿವಾಸ ಹಾಗೂ ಶ್ರೀ ವೆಂಕಟರಮಣ ದೇವರ ಲಕ್ಷ ದೀಪೋತ್ಸವವು ನ.14ರಂದು ವೈಭವ, ಸಡಗರದೊಂದಿಗೆ ಜರಗಿತು. ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ಪಟ್ಟದ ದೇವರಾದ ಶ್ರೀ ಶ್ರೀನಿವಾಸ ಹಾಗೂ ಶ್ರೀ ವೆಂಕಟರಮಣ ದೇವರ ಉತ್ಸವವು ಜರಗಿತು. ಪಟ್ಟದ ಶ್ರೀ ಶ್ರೀನಿವಾಸ ದೇವರು ಬಂಗಾರದ ಮಂಟಪದಲ್ಲಿ ಹಾಗೂ ಶ್ರೀ ವೆಂಕಟರಮಣ ದೇವರು ಬಂಗಾರದ ಪಲ್ಲಕ್ಕಿಯಲ್ಲಿ ರಥಬೀದಿಯಾಗಿ ವನಭೋಜನಕ್ಕೆ ವಾದ್ಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿತು.

ಈ ವೇಳೆ ಸಾವಿರಾರೂ ಮಂದಿ ಭಕ್ತಾದಿಗಳು ಪಾಲ್ಗೊಂಡರು. ವನಭೋಜನದಲ್ಲಿ ಉಭಯ ದೇವರಿಗೆ ಪಂಚಾಮೃತ ಅಭಿಷೇಕ, ನೈವೇದ್ಯ, ಮಹಾ ಆರತಿ ಬೆಳಗಲಾಯಿತು. ನಗರದ ಮುಖ್ಯರಸ್ತೆ ಬದಿ ನೂರಾರು ಅಂಗಡಿಗಳು ತೆರೆದಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿತ್ತು. ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ದಟ್ಟವಾಗಿತ್ತು.

ಮಂಗಳವಾರ ಅವಭ್ರತ ಸ್ನಾನ ನಡೆಯಿತು. ಉಭಯ ದೇವರು ಒಂದೇ ಪಲ್ಲಕ್ಕಿಯಲ್ಲಿ ರಥಬೀದಿಯಾಗಿ ರಾಮಸಮುದ್ರ ತೆರಳಿ ಅವಭ್ರತ ಸ್ನಾನ ಜರುಗಿತು. ಈ ವೇಳೆ ಜಿಎಸ್‌ಬಿ ಸಮಾಜ ಬಾಂಧವರು ಓಕುಳಿ ಹಚ್ಚಿ ಸಂಭ್ರಮಿಸಿದರು. ರಾಮಸಮುದ್ರದಿಂದ ದೇವರು ದೇಗುಲ ಪ್ರವೇಶಿಸಿ, ಪೂಜೆ ಪುನಸ್ಕಾರಗಳೊಂದಿಗೆ ಲಕ್ಷದೀಪೋತ್ಸವ ಸಂಪನ್ನಗೊಂಡಿತು.









































































































error: Content is protected !!
Scroll to Top