Thursday, December 1, 2022
spot_img
Homeರಾಜ್ಯಕಾಂತಾರ ಚಿತ್ರದ ವೇಷ ಧರಿಸಿ ಡೈಲಾಗ್ ಹೊಡೆದ ತಹಶೀಲ್ದಾರ್

ಕಾಂತಾರ ಚಿತ್ರದ ವೇಷ ಧರಿಸಿ ಡೈಲಾಗ್ ಹೊಡೆದ ತಹಶೀಲ್ದಾರ್


ಆಂಧ್ರಪ್ರದೇಶ : ಕಾಂತಾರ ಚಿತ್ರದಿಂದ ಪ್ರೇರಣೆ ಪಡೆದ ತಹಶೀಲ್ದಾರ್ ವೊಬ್ಬರು ದೈವದ ವೇಷ ಧರಿಸಿ ಕಾಂತಾರ ಡೈಲಾಗ್ ಹೊಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ರಿಷಬ್ ಶೆಟ್ಟಿ ನಟನೆಯ ಕಾಂತಾರ ಚಿತ್ರ ಒಂದೆಡೆ ಹಲವು ವಿವಾದಗಳಿಗೆ ಕಾರಣವಾಗಿದೆ. ಮತ್ತೊಂದೆಡೆಯಲ್ಲಿ ಜನರ ಮೆಚ್ಚುಗೆಯನ್ನೂ ಗಳಿಸಿದೆ. ಇದೀಗ ರಾಜ್ಯ ದಾಟಿ ಹೊರ ರಾಜ್ಯದಲ್ಲೂ ಕಾಂತಾರ ಚಿತ್ರಕ್ಕೆ ಜನಮನ್ನಣೆ ದೊರಕಿದೆ.
ಗುಂಟೂರಿನ ನಾಗಾರ್ಜುನ ಯೂನಿವರ್ಸಿಟಿಯಲ್ಲಿ ಆಂಧ್ರಪ್ರದೇಶ ತೆರಿಗೆ ಇಲಾಖೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ವೇಳೆ ವಿಜಯನಗರಂ ಜಿಲ್ಲೆಯ ತಹಶೀಲ್ದಾರ್ ಪ್ರಸಾದ್ ರಾವ್ ಅವರು ಕಾಂತಾರ ಸಿನಿಮಾದ ಗೆಟಪ್ನಲ್ಲಿ ಕಾಣಿಸಿಕೊಂಡು ಕಾಂತಾರ ಚಿತ್ರದ ಡೈಲಾಗ್ ಹೊಡೆದರು.
ಅವರನ್ನು ಕಂಡು ಅನೇಕ ಮಂದಿ ಅಚ್ಚರಿ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಹಲವರು ಇವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!