ನಿಟ್ಟೆ ಸರಕಾರಿ ಶಾಲೆಯ ಬಾಲಭವನ ಲೋಕಾರ್ಪಣೆ

ನಿಟ್ಟೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನಿರ್ಮಿಸಲ್ಪಟ್ಟ ಅರ್ಜುನ್‌ ಶೆಟ್ಟಿ ಬಾಲವನವನ್ನು ನ. 14ರಂದು ಸಚಿವ ಸುನೀಲ್‌ ಕುಮಾರ್‌ ಉದ್ಘಾಟಿಸಿ ಶುಭ ಹಾರೈಸಿದರು. ನಿಟ್ಟೆ ಗ್ರಾ. ಪಂ. ಅಧ್ಯಕ್ಷ ಸತೀಶ್‌ ಪೂಜಾರಿ, ನಿಟ್ಟೆ ವಿದ್ಯಾಸಂಸ್ಥೆಯ ಡೆವಲಪ್‌ಮೆಂಟ್‌ ನಿರ್ದೇಶಕ ಯೋಗೀಶ್‌ ಹೆಗ್ಡೆ, ಅರ್ಜುನ್‌ ಚಾರಿಟೇಬಲ್‌ ಫೌಂಡೇಶನ್‌ ಟ್ರಸ್ಟಿ ಎಸ್.‌ ಸುಧೀರ್‌ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.‌ ರವೀಂದ್ರ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ, ಹಿರಿಯರಾದ ಎನ್. ಅಶೋಕ್, ಪ್ರಶಾಂತ ಕುಮಾರ್‌, ಶಾಲಾ ಮುಖ್ಯೋಪಾದ್ಯಾಯಿನಿ ಶೋಭಾ ಪಿ. ಎನ್‌. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





























































































error: Content is protected !!
Scroll to Top