ಬಂಟ್ವಾಳದ ಮಹಿಳೆಗೆ ತ್ರಿವಳಿ ಶಿಶು ಜನನ


ಬಂಟ್ವಾಳ: ತಾಲೂಕಿನ ಬರಿಮಾರು ಗ್ರಾಮದ ಗಾಣದಪಾಲು ಎಂಬಲ್ಲಿ ಮಹಿಳೆಯೊಬ್ಬರು ಮೂರು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಪದ್ಮನಾಭ ಪೂಜಾರಿ ಎಂಬವರ ಪತ್ನಿ ದೀಕ್ಷಿತಾ ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೆರಿಗೆ ತಜ್ಞೆ ಡಾ.ವಿನೀತಾ ಶೆಟ್ಟಿ ಈ ಹೆರಿಗೆ ಮಾಡಿಸಿದ್ದಾರೆ. ಒಂದು ಗಂಡು ಮತ್ತು ಎರಡು ಹೆಣ್ಣು ಮಕ್ಕಳು ಜನಿಸಿದ್ದು, ಸದ್ಯ ತಾಯಿ ಮತ್ತು ಮಕ್ಕಳು ತೀವ್ರ ನಿಗಾ ಘಟಕದಲ್ಲಿದ್ದಾರೆ. ತಾಯಿ ಮತ್ತು ಶಿಶುಗಳು ಆರೋಗ್ಯದಿಂದಿವೆ ಎಂದು ವೈದ್ಯರು ತಿಳಿಸಿದ್ದಾರೆ.















































































































































error: Content is protected !!
Scroll to Top