Thursday, December 1, 2022
spot_img
Homeಸುದ್ದಿಡ್ರಿಪ್ಸ್‌ನಲ್ಲಿ ಪ್ಲಾಸ್ಮಾ ಎಂದು ನೀಡಿದ್ದು ಮೂಸಂಬಿ ಜ್ಯೂಸ್‌: ರೋಗಿ ಸಾವು

ಡ್ರಿಪ್ಸ್‌ನಲ್ಲಿ ಪ್ಲಾಸ್ಮಾ ಎಂದು ನೀಡಿದ್ದು ಮೂಸಂಬಿ ಜ್ಯೂಸ್‌: ರೋಗಿ ಸಾವು

ಪ್ಲಾಸ್ಮಾ ಪೊಟ್ಟಣದಲ್ಲಿ ಜ್ಯೂಸ್‌ ತುಂಬಿಸಿ ಮಾರಾಟ ಮಾಡುವ ಜಾಲ

ಲಖನೌ: ರೋಗಿಗೆ ನೀಡುವ ಡ್ರಿಪ್ಸ್‌ನಲ್ಲಿ ಪ್ಲಾಸ್ಮಾ ಬದಲಿಗೆ ಮೂಸಂಬಿ ರಸ ನೀಡಿದ ಪರಿಣಾಮ ಡೆಂಗ್ಯೂ ರೋಗಿಯೊಬ್ಬರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇದೀಗ ಇಡೀ ಆಸ್ಪತ್ರೆಯನ್ನು ವೈದ್ಯಾಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಜಲ್ವಾ ಎಂಬಲ್ಲಿ ಈ ಘಟನೆ ನಡೆದಿದ್ದು, ಡೆಂಗ್ಯೂ ರೋಗಿಯೊಬ್ಬರ ದೇಹಕ್ಕೆ ಪ್ಲಾಸ್ಮಾ ನೀಡುವುದಕ್ಕೆ ಬದಲಾಗಿ ಮೂಸಂಬಿ ರಸ ನೀಡಿದ್ದರು.
ರಕ್ತಕ್ಕೆ ಮೂಸಂಬಿ ರಸ ಸೇರಿದ ಪರಿಣಾಮವಾಗಿ ರೋಗಿ ಪ್ರದೀಪ್‌ ಪಾಂಡೆ ಮೃತಪಟ್ಟಿದ್ದಾರೆ. ಈ ಘಟನೆಯಿಂದಾಗಿ ಉತ್ತರ ಪ್ರದೇಶದಲ್ಲಿ ನಕಲಿ ರಕ್ತನಿಧಿಗಳ ಅಕ್ರಮ ಬಯಲಾಗಿದೆ.
ಪ್ಲಾಸ್ಮಾ ಪೊಟ್ಟಣದಲ್ಲಿ ಮೂಸಂಬಿ ರಸ ಇರುವುದನ್ನು ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇಡೀ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದ್ದು, ಅಲ್ಲಿನ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!