ಮಂಗಳೂರು ದಸರಾ ಹುಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು : ನ್ಯೂ ಯುವಕ ಮಂಡಲ ಮಾರ್ನೆಮಿಕಟ್ಟೆ ಮಂಗಳಾದೇವಿ, ಬಿಲ್ಲವ ಬ್ರಿಗೇಡ್‌ ಕೇಂದ್ರೀಯ ಮಂಡಳಿ ಮಂಗಳೂರು, ಬಿಲ್ಲವ ಬ್ರಿಗೇಡ್‌ ವತಿಯಿಂದ ಅ. 2ರಿಂದ 5ರವರೆಗೆ ಮಂಗಳೂರಿನಲ್ಲಿ ದಸರಾ ಮಹೋತ್ಸವ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಸೆ. 25ರಂದು ದ. ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್‌ ಕುಮಾರ್‌ ಕಾರ್ಕಳದಲ್ಲಿ ಬಿಡುಗಡೆಗೊಳಿಸಿದರು.

ಅ. 2ರಂದು ರಾತ್ರಿ ಸಮಯ 7ಕ್ಕೆ ಬಿಲ್ಲವ ಬ್ರಿಗೇಡ್‌ ವೇದಿಕೆಯಲ್ಲಿ ಊದು ಕಾರ್ಯಕ್ರಮ, ಅ.4 ರಂದು ಮುಂಜಾನೆ ಸಮಯ 10ಕ್ಕೆ ಪಿಲಿನಲಿಕೆ, ರಾತ್ರಿ 8ಕ್ಕೆ ಶೋಭಾಯಾತ್ರೆ ಮಾರಿಯಮ್ಮ, ಮಹಿಷಮರ್ದಿನಿ ದೇವಸ್ಥಾನ ಬೋಳಾರ ಮತ್ತು ಅ.5 ರಂದು ಮಂಗಳಾದೇವಿ ದೇವಸ್ಥಾನ ರಥೋತ್ಸವದ ಶೋಭಾಯಾತ್ರೆಯಲ್ಲಿ ಹುಲಿವೇಷ ಕುಣಿತ ಮತ್ತು ಟ್ಯಾಬ್ಲೋ ಆಕರ್ಷಕ ಮೆರವಣಿಗೆ ಜರುಗುವುದು.

ಬಿಲ್ಲವ ಬ್ರಿಗೇಡ್‌ ಮಂಗಳೂರು








































































































error: Content is protected !!
Scroll to Top