ಎಸ್‌ಡಿಪಿಐ ಸಾಕಿ ಬೆಳೆಸಿದ್ದು ಬಿಜೆಪಿ – ಬಿಪಿನ್‌ಚಂದ್ರ ಪಾಲ್‌ ನಕ್ರೆ

ಕಾರ್ಕಳ : ಭ್ರ್ರಷ್ಟಾಚಾರವನ್ನೇ ರಾಜಕೀಯವಾಗಿಸಿಕೊಂಡ ಬಿಜೆಪಿಯ ರಾಜಕೀಯ ಸಂಸ್ಕೃತಿಯಲ್ಲಿ ಬೆಳೆದು ಬಂದ ಸಚಿವ ಸುನೀಲ್ ಕುಮಾರ್ ಅವರ ಕಣ್ಣಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಭ್ರಷ್ಟಾಚಾರಿಯ ಹಾಗೆ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಯಾಕೆಂದರೆ ವ್ಯಕ್ತಿಯ ನೋಡುವ ದೃಷ್ಟಿ ಮತ್ತು ಆಡುವ ಮಾತು ಆತನ ಸಂಸ್ಕೃತಿಯನ್ನು ಅವಲಂಬಿತವಾಗಿರುತ್ತವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.

ಸರಕಾರ ಮೌನ – ಚೌಚಿತ್ಯವಾದರೂ ಏನು ?
ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರುಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರವನ್ನು ಲೋಕಾಯುಕ್ತ ವಿಚಾರಣೆಗೊಳಪಡಿಸಲು ಜಾರಿಕೊಳ್ಳುತ್ತಿರುವ ಸುನೀಲ್ ಕುಮಾರ್ ವಿದ್ಯುತ್‌ ಬಿಲ್ ದರ ಏರಿಕೆಗೆ ಕಲ್ಲಿದ್ದಲು ಕೊರತೆ ಕಾರಣ ಮುಂದಿಟ್ಟಿದ್ದಾರೆ. ಕೇಂದ್ರದಲ್ಲಿ ಇವರದ್ದೇ ಸರಕಾರ ಇರುವ ಹೊರತಾಗಿಯೂ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆ ಆಗುತ್ತಿರುವುದಕ್ಕೆ ಸಚಿವರ ಬೇಜವಾಬ್ದಾರಿತನವೇ ಕಾರಣ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಸರಕಾರದ 40 ಪರ್ಸೆಂಟ್ ಕಮಿಷನ್ ದಂಧೆ ಪ್ರಕರಣದಲ್ಲಿ ದೂರುದಾರ ರಾಜ್ಯ ಗುತ್ತಿಗೆದಾರ ಸಂಘದವರು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಾದರೆ ಯಾವ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಒತ್ತಾಯಿಸಿದರೂ ಸರಕಾರ ಮೌನ ವಹಿಸಿದೆ. ಇದರ ಔಚಿತ್ಯವಾದರೂ ಏನು ? ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಪಿಎಸ್ಐ ನೇಮಕಾತಿಯ ಬಹುಕೋಟಿ ಲಂಚ ಪ್ರಕರಣ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣವೇ ಮೊದಲಾದ ಇವರದ್ದೇ ಸರಕಾರದ ಹತ್ತು ಹಲವು ಭ್ರಷ್ಟಾಚಾರದ ಪ್ರಕರಣಗಳನ್ನು ಈವರೆಗೂ ಪಾರದರ್ಶಕ ತನಿಖೆಗೆ ಏಕೆ ಒಳಪಡಿಸಿಲ್ಲ ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸಿದ್ದರಾಮಯ್ಯ ಬದ್ಧತೆ ಪ್ರಶ್ನಿಸುವ ನೈತಿಕತೆ ಇಲ್ಲ
ಜಿ ಕೆಟಗರಿ ಸೈಟ್ ಹಂಚಿಕೆ ಸಂಪೂರ್ಣ ನಿಷೇಧವಾಗಿದ್ದರೂ, ಬದಲಿ ನಿವೇಶನದ ಹೆಸರಲ್ಲಿ ತಮ್ಮವರಿಗೆ ಕೋಟ್ಯಾಂತರ ರೂ. ಬೆಲೆ ಬಾಳುವ ಸೈಟ್ ಹಂಚಿಕೆ ಮಾಡಿ ಸುಪ್ರಿಂ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡ ಈ ಸರಕಾರದ ಯಾವುದೇ ಸಚಿವನಿಗೆ ಪ್ರತಿ ಪಕ್ಷ ನಾಯಕ ಸಿದ್ಧರಾಮಯ್ಯ ಆರ್ಥಿಕ ಮತ್ತು ಸಾಮಾಜಿಕ ಬದ್ಧತೆಯನ್ನೊಳಗೊಂಡ ರಾಜಕೀಯ ನೈತಿಕತೆಯನ್ನು ಪ್ರಶ್ನಿಸುವ ಶಕ್ತಿ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಬಿಜೆಪಿ ಎಸ್‌ಡಿಪಿಐ ಸಾಕಿ ಬೆಳೆಸಿದೆ
ದೇಶದ ಹಿತದೃಷ್ಠಿಗಿಂತ ಅಧಿಕಾರವೇ ಮುಖ್ಯವೆಂದು ಬಗೆದಿದ್ದ‌ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಗುರಿಯೊಂದಿಗೆ ಪಿಎಫ್ಐ ಗೆ ಸಲುಗೆ ಕೊಟ್ಟು ಎಸ್ಡಿಪಿಐಯನ್ನು ಸಾಕಿ ಬೆಳೆಸಿತ್ತು. ಇದಕ್ಕೇ ರಾಮಸೇನೆಯ ಪ್ರಮೋದ್ ಮುತಾಲಿಕ್ ಅವರೇ ಸಾಕ್ಷಿ ನುಡಿದಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಸುದೀರ್ಘ ಆಡಳಿತಾವಧಿಯಲ್ಲಿ ಸೆಮಿ ಸಂಘಟನೆಯೂ ಸೇರಿ ಸುಮಾರು 36ಕ್ಕೂ ಹೆಚ್ಚು ದೇಶದ ಒಳಗೆ ಮತ್ತು ದೇಶದ ಹೊರಗೆ ದೇಶದ ವಿರುದ್ಧ ಕಾರ್ಯನಿರ್ವಸುತ್ತಿದ್ದ ಉಗ್ರಗಾಮಿ ಸಂಘಟನೆಗಳನ್ನು ನಿಷೇಧಿಲಾಗಿತ್ತು. ಆ ಧೈರ್ಯ ಮತ್ತು ಇಚ್ಛಾಶಕ್ತಿ ಈ ಸರಕಾರಕ್ಕಿಲ್ಲ. ಬಹುಶಃ ಈ ಸತ್ಯವನ್ನು ಅರಗಿಸಲು ಸಚಿವ ಸುನೀಲ್ ಕುಮಾರ್ ಅವರಿಗೆ ಕಷ್ಟವಾದೀತು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top