ಮಾಳ ಗ್ರಾ.ಪಂ. ನೂತನ ಅ‍ಧ್ಯಕ್ಷರಾಗಿ ರಕ್ಷಿತಾ ಶೆಟ್ಟಿ

ಕಾರ್ಕಳ : ಮಾಳ ಗ್ರಾ.ಪಂ. ಅಧ್ಯಕ್ಷರಾಗಿ ಮಾಳ ಚೌಕಿಯ ರಕ್ಷಿತಾ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅ‍ಧ್ಯಕ್ಷರಾಗಿದ್ದ ಮಲ್ಲಿಕಾ ಶೆಟ್ಟಿ ಅವರಿಂದ ತೆರವಾದ ಸ್ಥಾನಕ್ಕೆ ರಕ್ಷಿತಾ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ಅಶೋಕ್ ಬರ್ವೆ ಮುಂದುವರಿಯಲಿದ್ದಾರೆ.
ಸಾಮಾನ್ಯ ಮಹಿಳೆ ಮೀಸಲಾತಿ ಪಡೆದ ಮಾಳ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ 2021ರ ಫ್ರೆಬ್ರವರಿಯಲ್ಲಿ ಮಲ್ಲಿಕಾ ಅವರನ್ನು ಆಯ್ಕೆ ಮಾಡಲಾಗಿತ್ತು. ಪಂಚಾಯತ್‌ ಆಡಳಿತಾತ್ಮಕ ವಿಚಾರದಲ್ಲಿ ಸದಸ್ಯರ ಅಭಿಪ್ರಾಯ ಪಡೆಯದೇ ಮಲ್ಲಿಕಾ ಅವರು ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಸದಸ್ಯರು 2022ರ ಸೆಪ್ಟೆಂಬರ್‌ನಲ್ಲಿ ಅವಿಶ್ವಾಸ ಮಂಡನೆ ಮೂಲಕ ಮಲ್ಲಿಕಾ ಅವರನ್ನು ಅ‍ಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿದ್ದರು. ಅಂದು 10 ಮಂದಿ ಗ್ರಾ.ಪಂ. ಸದಸ್ಯರು ಅಧ್ಯಕ್ಷೆ ಮಲ್ಲಿಕಾ ವಿರುದ್ಧ ಮತ ಚಲಾಯಿಸಿದ್ದರೆ, ನಾಲ್ವರು ಅವರ ಪರವಾಗಿ ಮತ ಚಲಾಯಿಸಿದ್ದರು. ಸೆ. 26ರಂದು ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಈಶ್ವರ ನಾಯಕ್‌ ಅವರು ಚುನಾವಣಾಧಿಕಾರಿಯಾಗಿ ಕರ್ವತ್ಯ ನಿರ್ವಹಿಸಿದ್ದರು.









































































































error: Content is protected !!
Scroll to Top