HomeUncategorizedರಾಜ್ಯ ಅರಣ್ಯ ಇಲಾಖೆ ಶ್ವಾನದಳದ ಮೊದಲ ಶ್ವಾನ ರಾಣಾ ಇನ್ನಿಲ್ಲ

Related Posts

ರಾಜ್ಯ ಅರಣ್ಯ ಇಲಾಖೆ ಶ್ವಾನದಳದ ಮೊದಲ ಶ್ವಾನ ರಾಣಾ ಇನ್ನಿಲ್ಲ

ಬೆಂಗಳೂರು : ಕರ್ನಾಟಕ ಅರಣ್ಯ ಇಲಾಖೆ ಶ್ವಾನದಳದ ಮೊದಲ ಶ್ವಾನ ರಾಣಾ ಇನ್ನಿಲ್ಲ. ವನ್ಯಜೀವಿ ಅಪರಾಧ ಪತ್ತೆ ದಳದ 13 ವರ್ಷದ ಜರ್ಮನ್ ಶೆಫರ್ಡ್ ಶ್ವಾನ ಇಂದು ಮಂಗಳವಾರ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಮೃತಪಟ್ಟಿದೆ. ಬಂಡೀಪುರ ಹುಲಿ ಅಭಯಾರಣ್ಯದ ನಿರ್ದೇಶಕ ರಮೇಶ್ ಮಾತನಾಡಿ, ವಯೋಸಹಜ ಕಾಯಿಲೆಯಿಂದ ಶ್ವಾನ ಮೃತಪಟ್ಟಿದ್ದು, ರಾಣಾ ಸೇವೆಯಿಂದ ನಿವೃತ್ತಿಯಾಗಿ ಬೇರೆ ಶ್ವಾನವನ್ನು ನೇಮಕ ಮಾಡಿದ್ದರೂ ಕೂಡ ಅದರ ಸ್ಥಾನವನ್ನು ತುಂಬಲು ಬೇರೆ ಶ್ವಾನಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಣಾ ಕರ್ನಾಟಕ ಅರಣ್ಯ ಇಲಾಖೆ ಶ್ವಾನದಳಕ್ಕೆ 2014ರಲ್ಲಿ ಸೇರ್ಪಡೆಯಾಗಿತ್ತು. ಭೋಪಾಲ್ 9ನೇ ಬೆಟಾಲಿಯನ್, ವಿಶೇಷ ಸಶಸ್ತ್ರ ಪಡೆ ಮತ್ತು ಶ್ವಾನದಳದಲ್ಲಿ ಅದಕ್ಕೆ ತರಬೇತಿಯಾಗಿತ್ತು. ಕಳೆದ 5 ವರ್ಷಗಳಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳನ್ನು ಬೇಧಿಸುವಲ್ಲಿ ರಾಣಾ ಪಾತ್ರ ಮುಖ್ಯವಾಗಿದೆ. ಹುಲಿ ಬೇಟೆ ಪ್ರಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚುವಲ್ಲಿ ರಾಣಾ ಪಾತ್ರ ಬಹಳ ಮುಖ್ಯವಾಗಿದೆ. ಅರಣ್ಯ ಇಲಾಖೆಯಿಂದ ಗೌರವವಾಗಿ ರಾಣಾನ ಅಂತಿಮ ವಿಧಿವಿಧಾನ ನೆರವೇರಿತು.

LEAVE A REPLY

Please enter your comment!
Please enter your name here

Latest Posts

error: Content is protected !!