ತೆಳ್ಳಾರು : ರಸ್ತೆಗೆ ಉರುಳಿದ ಬೃಹತ್‌ ಮರ

ಕಾರ್ಕಳ : ಕಾರ್ಕಳ ನಗರ ಹಾಗೂ ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಬೀಸಿದ ಗಾಳಿ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ದುರ್ಗ ಗ್ರಾಮದ ತೆಳ್ಳಾರು ಪಲಾಯಿಬಾಕ್ಯಾರು ಎಂಬಲ್ಲಿ ಬೃಹತ್‌ ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ. ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ಥವಾಗಿದೆ. ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಇರುವ ಕಂಬಕ್ಕೆ ಮರ ಉರುಳಿದ್ದು, ಮರ ತೆರವುಗೊಳಿಸುವಲ್ಲಿ ಮೆಸ್ಕಾಂ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳೀಯರು ಸಹಕರಿಸಿದ್ದಾರೆ. ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ. ಕೃಷ್ಣ, ಮಾಜಿ ಸದಸ್ಯ ರಾಜೇಶ್‌ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ಸತೀಶ್‌ ನಾಯಕ್‌, ಸುರೇಶ್‌ ಸಫಲಿಗ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಹಕರಿಸಿದರು.

ಮನೆಗೆ ಹಾನಿ
ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಕತಿಜಾ ಬಾನು ಮನೆಗೆ ತೆಂಗಿನ ಮರ ಬಿದ್ದಿದೆ. ಇದರಿಂದ ಸುಮಾರು 75 ಸಾವಿರ ರೂ. ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಕಾರ್ಕಳ : ಕಸಬ ಜೋಗುಳಬೆಟ್ಟು ಚಂದ್ರಯ್ಯ ಆಚಾರ್‌ ಎಂಬವರ ಮನೆ ಹಂಚು ಗಾಳಿಗೆ ಹಾರಿಹೋಗಿದೆ. ಸಿಡಿಲಿನ ಆಘಾತಕ್ಕೆ ವಿದ್ಯುತ್‌ ಪರಿಕರ ಹಾನಿಗೀಡಾಗಿದೆ.
ಎರ್ಲಪ್ಪಾಡಿ ಪರಿಸರದಲ್ಲಿ ಬೀಸಿದ ಗಾಳಿಗೆ ಗೋವಿಂದೂರು ಕುಟ್ಟಿ ಮೂಲ್ಯ ಎಂಬವರ ಮನೆ ಹಾನಿಗೀಡಾಗಿದೆ.







































































error: Content is protected !!
Scroll to Top