ಕಾರ್ಕಳ : ಕಾಬೆಟ್ಟುವಿನಲ್ಲಿರುವ ಸರಕಾರಿ ಐಟಿಐ ಕಾಲೇಜಿನ ಕಿಟಕಿ ಗಾಜುಗಳನ್ನು ಒಡೆದು ವ್ಯಕ್ತಿಯೋರ್ವ ವಿಕೃತಿ ಮೆರೆದ ಘಟನೆ ಮೇ. 4 ರಂದು ನಡೆದಿದೆ.
ತರಬೇತಿ ಸಂಸ್ಥೆಯ ಕಾರ್ಯಾಗಾರ ಹಾಗೂ ಟೆಕ್ ಲ್ಯಾಬ್ ಕಟ್ಟಡದ 12 ಕಿಟಕಿಗಳ ಗಾಜು ಒಡೆದಿದ್ದು ಒಟ್ಟು 1 ಲಕ್ಷ ರೂ. ನಷ್ಟವಾಗಿದೆ. ಈ ಬಗ್ಗೆ ನಿರ್ಮಿತಿ ಕೇಂದ್ರದ ಯೋಜನಾ ಅಭಿಯಂತರ ಪವನ್ ಪಿ.ಡಿ. ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ಆರೋಪಿಯ ಬಂಧನ
ಕಿಡಿಗೇಡಿಯ ಪತ್ತೆಗಾಗಿ ಪೊಲೀಸರು ಸಿಸಿಟಿವಿ ಪರಿಶೀಲಿಸಿದರು. ಸಿಸಿಟಿವಿ ದೃಶ್ಯದಲ್ಲಿ ಸ್ಥಳೀಯ ನಿವಾಸಿ ವಿಶ್ವನಾಥ ಎಂಬಾತ ಕೃತ್ಯವೆಸಗಿರುವುದು ದೃಢಪಟ್ಟಿದೆ. ಘಟನೆ ಮರುದಿನವೇ ಅಂದರೆ ಮೇ 5ರಂದು ವಿಶ್ವನಾಥನನ್ನು ಆತನ ಗುಂಡ್ಯಡ್ಯ ಮನೆಯಿಂದ ಕಾರ್ಕಳ ನಗರ ಪೊಲೀಸರು ವಶಕ್ಕೆ ಪಡೆದಿದ್ದು, ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯ ವಿಶ್ವನಾಥನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.





































