ಮಿಂಚಿದ ಅಶ್ವಿನ್‌: ಇಂಗ್ಲೆಂಡ್‌ 178 ರನ್‌ಗೆ ಆಲ್‌ ಔಟ್

ಮೊದಲ ಇನ್ನಿಂಗ್ಸ್‌ ನಲ್ಲಿ ಫಾಲೋ ಆನ್‌ ಭಿತಿ ಎದುರಿಸಿದ ಭಾರತ, ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಭಾರತ ಆರ್.‌ ಅಶ್ವಿನ್‌ ಬಿಗು ದಾಳಿಯಿಂದ 178 ರನ್‌ ಗೆ ಆಲ್‌ ಔಟ್‌ ಮಾಡಿದೆ.
271 ರನ್‌ ಮುನ್ನಡೆಯಿಂದ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ಕೇವಲ 178 ರನ್ ಗಳಿಗೆ ಆಲೌಟ್‌ ಆಗಿದೆ. ರೂಟ್‌ 40 ಗಳಿಸಿದ್ದೇ ಆಂಗ್ಲರ ಸರದಿಯ ಶ್ರೇಷ್ಠ ಗಳಿಕೆ.
ಉಳಿದಂತೆ ಒಲಿ ಪೋಪ್‌ 29 ರನ್‌, ಬೆಸ್‌ 25 ರನ್‌ ಮತ್ತು ಬಟ್ಲರ್‌ 24 ರನ್‌ ಗಳಿಸಿ ಔಟಾದರು. ಭಾರತ ಪರ ಬಿಗು ದಾಳಿ ಸಂಘಟಿಸಿ ಆಶ್ವಿನ್‌ ಆರು ವಿಕೆಟ್‌ ಕಿತ್ತರು. ನದೀಂ ಎರಡು ವಿಕೆಟ್‌ ಕಬಳಿಸಿದರೆ, ಇಶಾಂತ್‌ ಮತ್ತು ಬೂಮ್ರಾ ತಲಾ ಒಂದು ವಿಕೆಟ್‌ ಪಡೆದರು. ಇದೇ ವೇಳೆ ಇಶಾಂತ್‌ ಟೆಸ್ಟ್‌ ಕ್ರಿಕೆಟ್‌ ನಲ್ಲಿ 300 ವಿಕೆಟ್‌ ಕಿತ್ತ ಸಾಧನೆ ಮಾಡಿದರು.









































































































error: Content is protected !!
Scroll to Top