ಉಡುಪಿ: ಪೊಲೀಸರೆಂದು ಮಹಿಳೆಗೆ ನಂಬಿಸಿ ಚಿನ್ನಾಭರಣ ದೋಚಿದ ಅಪರಿಚಿತ ವ್ಯಕ್ತಿಗಳು

ಉಡುಪಿ: ಪೊಲೀಸ್ ಎಂದು ನಂಬಿಸಿ ಮಹಿಳೆಯೊರ್ವರ ನಲ್ವತ್ತು ಸಾವಿರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಅಂಬಲಪಾಡಿ ಜಂಕ್ಷನ್ ಬಳಿ ರವಿವಾರ ಮಧ್ಯಾಹ್ನ ನಡೆದಿದೆ.

ಅಂಬಲಪಾಡಿಯ ವಸಂತಿ ಎಂಬವರು ಇಂದು ಪ್ಲಾಟ್‌ವೊಂದರಲ್ಲಿ ಮನೆ ಕೆಲಸ ಮುಗಿಸಿ ನಡೆದುಕೊಂಡು ಹೋಗುತ್ತಿರುವಾಗ ಶ್ಯಾಮಿಲಿ ಹಾಲ್‌ನ ವಾಹನ ಪಾರ್ಕಿಂಗ್ ಸ್ಥಳದ ಬಳಿ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ನಿಲ್ಲಿಸಿ ನಿಂತುಕೊಂಡಿದ್ದರು. ಆ ಸಂದರ್ಭ ವಸಂತಿಯವರನ್ನು ತಡೆದ ಇಬ್ಬರು, ನಾವು ಪೊಲೀಸ್‌ನವರು ಮುಂದೆ ಯಾರೋ ಹೆಂಗಸಿಗೆ ಚೂರಿ ತೋರಿಸಿ ಚಿನ್ನದ ಸರ ತೆಗೆದುಕೊಂಡು ಹೋಗಿದ್ದಾರೆ ನಿಮ್ಮ ಚಿನ್ನಾಭರಣಗಳನ್ನು ತೆಗೆದು ಕೊಡಿ ಪೇಪರ್‌ನಲ್ಲಿ ಕಟ್ಟಿಕೊಡುತ್ತೇನೆ ಎಂದು ನಂಬಿಸಿ ಅವರು ತೊಟ್ಟಿದ್ದ ಮುಕ್ಕಾಲು ಪವನ್ ಚಿನ್ನದ ಸರ ಹಾಗೂ ಅರ್ಧ ಪವನ್‌ನ 2 ಚಿನ್ನದ ಬಳೆಗಳನ್ನು ಪಡೆದುಕೊಂಡು ಪೇಪರ್‌ನಲ್ಲಿ ಸುತ್ತಿ ವಾಪಾಸು ಕೊಟ್ಟಿದ್ದರು.

ನಂತರ ಸಂಶಯಗೊಂಡ ಮಹಿಳೆ ಅವರು ಕೊಟ್ಟ ವಸ್ತುವನ್ನು ನೋಡಿದಾಗ ಅದರಲ್ಲಿ ನಕಲಿ 5 ಬಳೆಗಳು ಇತ್ತು. ವಸಂತಿಯರು ಮೋಸ ಹೋದ ಬಗ್ಗೆ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.





























































































































error: Content is protected !!
Scroll to Top