ಯಾರು ಅಲಂಕರಿಸಲಿದ್ದಾರೆ ಕಾರ್ಕಳ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ

ಕಾರ್ಕಳ : ಕಾರ್ಕಳ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕಾಗಿ ಜ. 12ರಂದು ಯೂತ್‌ ಕಾಂಗ್ರೆಸ್ ಮೊಬೈಲ್‌ ಆಪ್ ಮೂಲಕ ಚುನಾವಣೆ ನಡೆಯಲಿದ್ದು, ಇಬ್ಬರು ಕಣದಲ್ಲಿದ್ದಾರೆ. ಯೋಗೀಶ್‌ ಇನ್ನಾ ಹಾಗೂ ಸುಹಾಸ್‌ ಕಾವ ಮಧ್ಯೆ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧೆ ನಡೆಯುತ್ತಿದೆ. ಈ ಹಿಂದೆ ದೀಪಕ್‌ ಕೋಟ್ಯಾನ್‌ ಅವರು ಮೂರು ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಮುಂದಿನ ಅಧ್ಯಕ್ಷರು ಯಾರೆಂಬುದು ಮಂಗಳವಾರ ನಿರ್ಧಾರವಾಗಲಿದೆ. 35 ವರ್ಷದೊಳಗಿನ ಯೂತ್‌ ಕಾಂಗ್ರೆಸ್‌ ಸದಸ್ಯರೆಲ್ಲರಿಗೂ ಮತದಾನದ ಅವಕಾಶವಿದ್ದು, ಮುಂದಿನ ಮೂರು ವರ್ಷಗಳ ಅವಧಿಗಾಗಿ ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ. ಕಮಿಟಿ ಸದಸ್ಯರಾಗಲು ಪ್ರದೀಪ್‌ ಬೇಲಾಡಿಯವರೂ ಸ್ಪರ್ಧೆಯಲ್ಲಿದ್ದಾರೆ.
ಇನ್ನಾ ಗ್ರಾಮದ ಯೋಗೀಶ್‌ ನಯನ್‌ ಇನ್ನಾ ಅವರು ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಡಾರು ಗ್ರಾಮದ ಸುಹಾಸ್‌ ಕಾವ ಅವರು ಕಾರ್ಕಳ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಇಂಟಕ್‌ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಾಂತಾವರ ಗ್ರಾಮದ ಪ್ರದೀಪ್‌ ಬೇಲಾಡಿ ಅವರು ಇತ್ತೀಚೆಗೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಮತದ ಅಂತರದಿಂದ ಪರಾಭವಗೊಂಡಿದ್ದರು. ಇವರು ಈ ಹಿಂದೆ ವಿಶ್ವ ಹಿಂದೂ ಪರಿಷತ್‌ ತಾಲೂಕು ಕಾರ್ಯದರ್ಶಿಯಾಗಿದ್ದರು.

ಕಾಂಗ್ರೆಸ್‌ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಕಾರ್ಯ ಮಾಡಲಿದ್ದೇನೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಿದ್ದೇನೆ.
ಸುಹಾಸ್‌ ಕಾವ

ಬೂತ್‌ ಮಟ್ಟದಿಂದ ಪಕ್ಷ ಬಲಪಡಿಸುವುದು ನನ್ನ ಮುಂದಿರುವ ಗುರಿ. ಪಕ್ಷದಲ್ಲಿ ಯುವಕರಿಗೆ ಹೆಚಿನ ಆದ್ಯತೆ ನೀಡುತ್ತೇನೆ. ಪಕ್ಷ ಸಂಘಟನೆಗಾಗಿ ಶ್ರಮಿಸುತ್ತೇನೆ.
ಯೋಗೀಶ್‌ ಇನ್ನಾ





























































































































error: Content is protected !!
Scroll to Top