ಕಾರ್ಕಳ : ಉಡುಪಿ ಬಸ್‌ ನಿಲ್ದಾಣ ಬಳಿ ಕಸದ ರಾಶಿ-ಕಸ ಸುರಿಯುವವರ ವಿರುದ್ಧ ಕ್ರಮ ಅಗತ್ಯ

ಕಾರ್ಕಳ : ಕಾರ್ಕಳದಲ್ಲಿರುವ ಉಡುಪಿ ಬಸ್‌ ನಿಲ್ದಾಣ ಬಳಿ ಕಸದ ರಾಶಿಯಿದ್ದು, ಈ ಸ್ಥಳದಲ್ಲಿ ಕಸ ಬಿಸಾಡಿ ಹೋಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಸ್ವಚ್ಛತೆಗಾಗಿ ವ್ಯಾಪಕ ಪ್ರಚಾರ ಮಾಡುತ್ತಿದ್ದಾಗ್ಯೂ ಕೆಲವರಂತು ಎಲ್ಲೆಂದರಲ್ಲಿ ಕಸ ಬಿಸಾಡುವ ಚಾಳಿ ಮುಂದುವರಿಸುತ್ತಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಅವರನ್ನು ಬದಲಾಯಿಸಲು ಸಾಧ್ಯವಿಲ್ಲ. ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರುವ ಬೆರಳೆಣಿಕೆ ಮಂದಿ ವಿರುದ್ಧ ಕಠಿಣ ಕ್ರಮ ಕೈಗೊಂಡಲ್ಲಿ ಇಡೀ ಕಾರ್ಕಳವೇ ಸ್ವಚ್ಛವಾಗಿರುವುದರಲ್ಲಿ ಅನುಮಾನವಿಲ್ಲ.

ಪ್ರತಿಯೊಂದಕ್ಕೂ ಪುರಸಭೆ ಹೊಣೆಯಲ್ಲ
ಕಾರ್ಕಳ ನಗರದಲ್ಲಿನ ಖಾಸಗಿ ಜಾಗ ಅಂದರೆ ಉಡುಪಿ ಬಸ್‌ ನಿಲ್ದಾಣದಂತಹ ಪ್ರದೇಶದಲ್ಲಿ ಕಸ ಕಂಡುಬಂದಾಗಲೂ ಸಾರ್ವಜನಿಕರು ಪುರಸಭೆಯನ್ನು ದೂಷಣೆ ಮಾಡುವುದು ಸಾಮಾನ್ಯ. ಆದರೆ, ಎಲ್ಲವನ್ನೂ ಪುರಸಭೆಯಿಂದ ನಿರೀಕ್ಷಿಸುವುದು ಸರಿಯಲ್ಲ. ಸಾರ್ವಜನಿಕರ ಸಹಭಾಗಿತ್ವವಿಲ್ಲದೇ ಕ್ಲೀನ್‌ ಸಿಟಿ ಮಾಡುವುದು ಕನಸಿನ ಮಾತು. ತಮ್ಮ ಪರಿಸರ ಸ್ವಚ್ಛವಾಗಿರಬೇಕೆನ್ನುವ ಕಾಳಜಿ ಪ್ರತಿಯೊಬ್ಬರಲ್ಲೂ ಮೈಗೂಡದೇ ಹೋದರೆ ಸ್ವಚ್ಚ ಕಾರ್ಕಳ ಪರಿಕಲ್ಪನೆ ಸಾಕಾರವಾಗುವುದಿಲ್ಲ. ಹೀಗಾಗಿ ಸರ್ವರೂ ಸ್ವ‍ಚ್ಛತೆಗೆ ಆದ್ಯತೆ ನೀಡುವುದು ಅತಿ ಅಗತ್ಯ.

ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿಯುವವರ ಕುರಿತು ಪುರಸಭೆಗೆ ಮಾಹಿತಿ ನೀಡಿದಲ್ಲಿ ಕಸ ಬಿಸಾಡುವವರಿಗೆ 5 ಸಾವಿರ ರೂ.ನಿಂದ 10 ಸಾವಿರ ರೂ. ತನಕ ದಂಡ ವಿಧಿಸಲಾಗುವುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಸ್ವಚ್ಛ ಕಾರ್ಕಳ ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಸರ್ವರ ಸಹಕಾರ ಬೇಕಾಗಿದೆ.
ರೇಖಾ ಜೆ. ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ ಕಾರ್ಕಳ





























































































































error: Content is protected !!
Scroll to Top