ಕಾರ್ಕಳ : ಅಂತಿಮ ಕಣದಲ್ಲಿ 796 ಅಭ್ಯರ್ಥಿಗಳು- ಹಲವು ಸ್ಥಾನಗಳಲ್ಲಿ ಅವಿರೋಧ ಆಯ್ಕೆ

ಕಾರ್ಕಳ : ಕಾರ್ಕಳ ತಾಲೂಕಿನ 27 ಗ್ರಾ.ಪಂ.ಗಳಿಗೆ ಡಿ. 27ರಂದು ಚುನಾವಣೆ ನಡೆಯಲಿದ್ದು, ಒಟ್ಟು 796 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಕಡ್ತಲ (14 ಸ್ಥಾನ) 30, ಮರ್ಣೆ (24 ಸ್ಥಾನ) 50, ಹಿರ್ಗಾನ (14 ಸ್ಥಾನ) 31, ಶಿರ್ಲಾಲು (8 ಸ್ಥಾನ) 16, ಕೆರ್ವಾಶೆ (8 ಸ್ಥಾನ) 16, ಮಾಳ (15 ಸ್ಥಾನ) 30, ಮುಡಾರು (16 ಸ್ಥಾನ) 36, ದುರ್ಗಾ (9 ಸ್ಥಾನ) 20, ಕುಕ್ಕುಂದೂರು (33 ಸ್ಥಾನ) 70, ಎರ್ಲಪ್ಪಾಡಿ (12 ಸ್ಥಾನ) 31, ಬೈಲೂರು (14 ಸ್ಥಾನ) 29, ನೀರೆ (15 ‍ಸ್ಥಾನ) 22, ಪಳ್ಳಿ (15 ಸ್ಥಾನ) 30, ಕಲ್ಯಾ (10 ಸ್ಥಾನ) 22, ನಿಟ್ಟೆ (31 ಸ್ಥಾನ) 49, ಸಾಣೂರು (18 ಸ್ಥಾನ) 37, ಮಿಯ್ಯಾರು (42 ಸ್ಥಾನ) 42, ನಲ್ಲೂರು (15 ಸ್ಥಾನ) 12, ಈದು (19 ಸ್ಥಾನ) 42, ರೆಂಜಾಳ (8 ಸ್ಥಾನ) 17, ಇರ್ವತ್ತೂರು (7 ಸ್ಥಾನ) 14, ಬೋಳ (10 ಸ್ಥಾನ) 13, ಕಾಂತಾವರ (9 ಸ್ಥಾನ) 26, ಬೆಳ್ಮಣ್‌ (18 ಸ್ಥಾನ) 38, ನಂದಳಿಕೆ (12 ಸ್ಥಾನ) 15, ಇನ್ನಾ (9 ಸ್ಥಾನ) 19, ಮುಂಡ್ಕೂರು (18 ಸ್ಥಾನ) 39 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಅವಿರೋಧವಾಗಿ ಆಯ್ಕೆಯಾದ ಸ್ಥಾನಗಳು
ಕಾರ್ಕಳ ತಾಲೂಕಿನ ಹಲವು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. ದುರ್ಗಾ ಗ್ರಾ.ಪಂ.ನ 1 ಸ್ಥಾನ, ಬೈಲೂರಿನ 1, ನೀರೆಯ 5, ನಿಟ್ಟೆಯ 7, ನಲ್ಲೂರಿನ 9, ಬೋಳದ 4, ನಂದಳಿಕೆಯ 4 ಸ್ಥಾನಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ. ಇವರೆಲ್ಲರೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಆಗಿರುತ್ತಾರೆ.





























































































































error: Content is protected !!
Scroll to Top