27 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಕಾರ್ಕಳ : ಪ್ರಕರಣವೊಂದರ ಸಂಬಂಧಿಸಿದಂತೆ ಕಳೆದ 27 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮೂಡಬಿದಿರೆಯ ಇಮ್ತಿಯಾಜ್ (54) ಎಂಬಾತನನ್ನು ಡಿ. 21ರಂದು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಈತ 1993ರಲ್ಲಿ ಅನಂತಶಯನದ ಮಲ್ಯ ಆಸ್ಪತ್ರೆಗೆ ಅಕ್ರಮ ಪ್ರವೇಶಿಸಿ, ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲಕ್ಷಣ ಮಲ್ಯ, ವಿವೇಕಾನಂದ ಮಲ್ಯ, ದಯಾನಂದ ಮಲ್ಯ, ಅಲಂಗಾರು, ನಿರಂಜನ ಶೆಟ್ಟಿ, ಪ್ರಸನ್ನ, ಸುನಿಲ್ ಪೈ, ವೀರೇಂದ್ರ ಇವರುಗಳ ಜತೆಗೂಡಿ ಈ ಕೃತ್ಯ ನಡೆಸಿದ್ದ. ವಿಚಾರಣೆ ನಡೆಸಿದ ಕಾರ್ಕಳ ನ್ಯಾಯಾಲಯವು ಇಮ್ತಿಯಾಜ್‍ನನ್ನು ಹೊರತುಪಡಿಸಿ ಉಳಿದ ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು. ಪ್ರಕರಣದ ಆರೋಪಿ ಇಮ್ತಿಯಾಜ್ ಜಾಮೀನು ಪಡೆದು ಬಳಿಕ ವಿಚಾರಣೆಗಾಗಿ ನ್ಯಾಯಲಯಕ್ಕೆ ಹಾಜರಾಗದೆ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ. ಹೀಗಾಗಿ ಈತನಿಗೆ ಅನೇಕ ಬಾರಿ ವಾರಂಟ್ ನೀಡಲಾಗಿತ್ತು. ಡಿ. 21ರಂದು ಕಾರ್ಕಳದ ಪೊಲೀಸರು ಈತನನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಠಾಣಾ ಎಸ್‌ಐ ಮಧು ಬಿ.ಇ, ಅಪರಾಧ ವಿಭಾಗದ ಪಿಎಸ್‍ಐ ದಾಮೋದರ ಕೆ.ಬಿ., ಎಎಸ್‍ಐ ರಾಜೇಶ್ ಪಿ. ಕಾನ್ಸಟೇಬಲ್ ಗಳಾದ ಘನಶ್ಯಾಮ, ರಾಘವೇಂದ್ರ ಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





























































































































error: Content is protected !!
Scroll to Top