ಕಾರ್ಕಳ : ಶಿಕ್ಷಕಿಯರ ತಾಳಮದ್ದಳೆ ತಂಡ ಉದ್ಘಾಟನೆ

ಕಾರ್ಕಳ : ತಾಲೂಕಿನ ಶಿಕ್ಷಕಿಯರ ತಾಳಮದ್ದಳೆ ತಂಡವು ಯಕ್ಷಗುರು ಪಿ.ವಿ. ಆನಂದ ಅವರ ನೇತೃತ್ವದಲ್ಲಿ ಸಿದ್ಧವಾಗಿದ್ದು ಅದರ ಉದ್ಘಾಟನಾ ಸಮಾರಂಭವು ನಾಟ್ಕದೂರು ಮುದ್ರಾಡಿಯಲ್ಲಿ ಡಿ. 20ರಂದು ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್‌ ಅವರು ಚೆಂಡೆ ನುಡಿಸುವ ಮೂಲಕ ಉದ್ಘಾಟನೆ ಮಾಡಿದರು. ಹೆಬ್ರಿ ಕ.ಸಾ.ಪ. ಅಧ್ಯಕ್ಷ ಪಿ.ವಿ. ಆನಂದ್ ಅಧ್ಯಕ್ಷತೆ ವಹಿಸಿದ್ದರು. ಧರ್ಮಪಾರ್ತಿ ಮೋಹನ್ ಗುರೂಜಿ ಆಶೀರ್ವಚನಗೈದರು. ಕಾರ್ಕಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಪೆನ್ ಟೀಮ್, ಕಾರ್ಕಳ ಮತ್ತು ಹೆಬ್ರಿ ಕಸಾಪ ಘಟಕಗಳು, ನಮ ತುಳುವೆರ್ ಕಲಾ ಸಂಘಟನೆ ಸದಸ್ಯರು ಉಪಸ್ಥಿತರಿದ್ದರು. ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸ್ವಾಗತಿಸಿ, ಹಿಂದೀ ಶಿಕ್ಷಕ ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ನಮ ತುಳುವೆರ್ ಸಂಘಟನೆಯ ಅಧ್ಯಕ್ಷ ಸುಕುಮಾರ ಮೋಹನ್ ವಂದಿಸಿದರು. ಕಾರ್ಯಕ್ರಮದ ಅನಂತರ ಶಿಕ್ಷಕಿಯರಿಂದ ಪಠ್ಯ ಪುಸ್ತಕ ಆಧಾರಿತ ರಾಮ ಧಾನ್ಯ ಚರಿತೆ ಮತ್ತು ಯಶೋಧರೆ ಪ್ರಸಂಗಗಳ ತಾಳಮದ್ದಳೆ ನಡೆಯಿತು. ರವಿ ಕುಮಾರ್ ಸೂರಾಲು ಅವರು ಭಾಗವತರಾಗಿ ಭಾಗವಾಗಿದ್ದರು.





























































































































error: Content is protected !!
Scroll to Top