ನ.29ರಂದು ಯಕ್ಷಧ್ರುವ ಪಟ್ಲ ಪೌಂಡೇಶನ್ ಕಾರ್ಕಳ ಘಟಕದ ಐದನೇ ವರ್ಷದ ಪಟ್ಲ ಸಂಭ್ರಮ

ಕಾರ್ಕಳ, ನ.24 : ಯಕ್ಷಧ್ರುವ ಪಟ್ಲ ಫೌಂಡೇಶನ್‌ ಇದರ ಕಾರ್ಕಳ ಘಟಕದ ಐದನೇ ವರ್ಷದ ಪಟ್ಲ ಸಂಭ್ರಮ ಕಾರ್ಯಕ್ರಮ ನ.29 ರಂದು ಸಂಜೆ 5 ಗಂಟೆಗೆ ಕಾರ್ಕಳದ ಮಾರಿಗುಡಿ ವಠಾರದಲ್ಲಿ ಜರಗಲಿದೆ. ಈ ಸಂದರ್ಭದಲ್ಲಿ ಕಲಾ ಗುರುಗಳ ಸನ್ಮಾನ, ಬಯಲಾಟ ಜರಗಲಿದೆ.
ಯಕ್ಷಗಾನದ ಅಶಕ್ತ ಕಲಾವಿದರ ಶ್ರೇಯೋಭಿವೃದ್ದಿಗಾಗಿ ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಸಮಾನ ಮನಸ್ಕರ ಜೊತೆಗೂಡಿ ಸ್ಥಾಪಿಸಿದ ಪಟ್ಲ ಫೌಂಡೇಶನ್ ಟ್ರಸ್ಟ್ ದೇಶದ ಹಲವಾರು ಕಡೆ ಘಟಕಗಳನ್ನು ಸ್ಥಾಪಿಸಿ ಯಕ್ಷಗಾನಾಸಕ್ತರನ್ನು ಒಂದುಗೂಡಿಸಿ ನೂರಾರು ಕಲಾವಿದರಿಗೆ ಈಗಾಗಲೇ ಸಹಾಯ ಮಾಡಿದೆ. ಮುಂದೆಯೂ ಕಲೆಯನ್ನೇ ನಂಬಿ ಬದುಕುವ ಕಲಾವಿದರ ಬದುಕು ಹಸನಾಗಬೇಕು ಎಂಬ ನೆಲೆಯಿಂದ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ.
ನ.29 ರಂದು ಸಂಜೆ ಕಾರ್ಕಳ ಘಟಕದ ಐದನೇ ವರ್ಷದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವಿ. ಸುನಿಲ್ ಕುಮಾರ್ ವಹಿಸಲಿದ್ದಾರೆ. ಡಾ.ಮಂಜುನಾಥ ಕಿಣಿಯವರು ಉದ್ಘಾಟಿಸಲಿದ್ದಾರೆ. ಮುನಿಯಾಲು ಉದಯಕುಮಾರ್ ಶೆಟ್ಟಿ , ಪಟ್ಲ ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ , ಕೋಶಾಧಿಕಾರಿ ಸಿ. ಎ. ಸುದೇಶ್ ಕುಮಾರ್ ರೈ ಗೌರವ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. ಈ ಸಂದರ್ಭದಲ್ಲಿ ಯಕ್ಷಗಾನ ಗುರುಗಳಾದ ಕೆರ್ವಾಶೆ ಆನಂದ ಗುಡಿಗಾರ್ ಮತ್ತು ಕಾರ್ಕಳ ಸತೀಶ್‌ ಮಡಿವಾಳ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಂಗವಾಗಿ ಪಾವಂಜೆಯ ಸುಬ್ರಹ್ಮಣ್ಯ ಮೇಳದವರಿಂದ “ಶ್ರೀ ಹರಿದರ್ಶನ” ಎಂಬ ಪೌರಾಣಿಕ ಬಯಲಾಟ ರಾತ್ರಿ 10.30ರ ತನಕ ಜರಗಲಿದೆ ಎಂದು ಘಟಕದ ಅಧ್ಯಕ್ಷ ವಿಜಯ ಶೆಟ್ಟಿ, ಕಾರ್ಯದರ್ಶಿ ಮಹಾವೀರ ಪಾಂಡಿ ಕಾಂತಾವರ ಮತ್ತು ಸಂಚಾಲಕ ಪ್ರೊ. ಪದ್ಮನಾಭ ಗೌಡ ಅವರು ತಿಳಿಸಿದ್ದಾರೆ.





























































































































error: Content is protected !!
Scroll to Top