Wednesday, December 8, 2021
spot_img
Homeಸಿನೆಮಾಪುಂಡಿಪಣವು ನಿರ್ಮಾಪಕರಿಂದ ಅವದೂತ ನಿತ್ಯಾನಂದ ಸ್ವಾಮಿಗಳ ಚಿತ್ರ ನಿರ್ಮಾಣ

ಪುಂಡಿಪಣವು ನಿರ್ಮಾಪಕರಿಂದ ಅವದೂತ ನಿತ್ಯಾನಂದ ಸ್ವಾಮಿಗಳ ಚಿತ್ರ ನಿರ್ಮಾಣ

ಸುಧಾಕರ್ ಬನ್ನಂಜೆ ಅವರ ನಿರ್ದೇಶನ

ಕಾರ್ಕಳ : ಪುಂಡಿಪಣವು ಎಂಬ ಸದಭಿರುಚಿಯ ತುಳು ಚಿತ್ರ ನಿರ್ಮಾಣ ಮಾಡಿದ್ದ ರಾಮಕೃಷ್ಣ ಶೆಟ್ಟಿ ಅವರು ಇದೀಗ ತುಳುವಿನಲ್ಲಿ ಮತ್ತೊಂದು ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ.ಭಾರತಿ ಶೆಟ್ಟಿ ದುಬೈ ಅವರು ಈ ಚಿತ್ರಕ್ಕೆ ಸಹ ನಿರ್ಮಾಪಕಿ ಆಗಿದ್ದಾರೆ.
ಅವದೂತ ನಿತ್ಯಾನಂದ ಸ್ವಾಮಿಗಳು ಬದುಕು ಮತ್ತು ಮಹಿಮೆಯ ಕತೆ ಹೊಂದಿರುವ ಜೈ ಗುರುದೇವ್‌ ಎಂಬ ಈ ಚಿತ್ರಕ್ಕೆ ತುಳು -ಕನ್ನಡದ ಖ್ಯಾತ ನಿರ್ದೇಶಕ ಸುಧಾಕರ್ ಬನ್ನಂಜೆ ಅವರು ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರದ ಕತೆ ಈಗಾಗಲೇ ಸಿದ್ಧವಾಗಿದ್ದು ಬನ್ನಂಜೆ ಅವರು ಸಂಭಾಷಣೆ ರಚನೆಯಲ್ಲಿ ತೊಡಗಿದ್ದಾರೆ.ತಾಂತ್ರಿಕ ವರ್ಗ,ಕಲಾವಿದರ ಆಯ್ಕೆ ನಡೆಯುತ್ತಿದೆ.ಹೊಸ ವರ್ಷದಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ರಾಮಕೃಷ್ಣ ಶೆಟ್ಟಿಯವರು ತಿಳಿಸಿದ್ದಾರೆ.
ನಮ್ಮ ಸಂಸ್ಕೃತಿಯಲ್ಲಿ ದೈವಗಳು,ಅವಧೂತರು,ಸಾಧು,ಸಂತರು ಜನಮಾನಸದಲ್ಲಿ ನೆಲೆಯಾದವರು.ಅವರಲ್ಲಿ ಒಬ್ಬರು ಅವಧೂತ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿಗಳು. ಕೇರಳದಲ್ಲಿ ಜನಿಸಿದ ಇವರು ಭಾರತದ ಹಲವು ಕಡೆ , ವಿದೇಶಗಳಲ್ಲಿ ಸಂಚರಿಸಿ ಆಧ್ಯಾತ್ಮಿಕತೆಯನ್ನು ಅವರದೇ ಆದ ಶೈಲಿಯಲ್ಲಿ ಪ್ರಚಾರ ಮಾಡಿದರು. ಅವರ ಕರ್ಮಭೂಮಿ ತುಳುನಾಡು ಹಾಗೂ ಮುಂಬಯಿ.ಮುಂಬಯಿ ಸಮೀಪದ ಗಣೇಶಪುರಿ ಅವರ ಸಾಧನಾ ಕೇಂದ್ರ. ಲಕ್ಷಾಂತರ ಭಕ್ತರು ಅಲ್ಲಿಗೆ ಭೇಟಿ ನೀಡುತ್ತಾರೆ. ಅವರನ್ನು ನಂಬಿದರೆ ತಮ್ಮ ಕಷ್ಟ ಪರಿಹಾರ ಆಗಿ ನೆಮ್ಮದಿ ಕಾಣಬಹುದು ಎಂದು ನಂಬಿದ್ದಾರೆ.
ತನ್ನ ನಡೆ-ನುಡಿ, ಪವಾಡ, ಮತ್ತು ಪರಿಹಾರಗಳಿಂದ ಜನರಿಗೆ ಅವರು ಅವಧೂತರಂತೆ ಕಂಡಿದ್ದಾರೆ. ಅವರ ಆಡಂಬರ ರಹಿತ ಸರಳ ಜೀವನ ಜನರ ಮನಸೂರೆಗೊಂಡಿದೆ. ಅವರನ್ನು ಮನಃಪೂರ್ವಕವಾಗಿ ನಂಬಿದವರ ಕಷ್ಟಗಳು ದೂರ ಆಗಿವೆ.ಅವರನ್ನು ನಿಂದಿಸಿದವರು ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದಿದ್ದಾರೆ.ಹೆಚ್ಚಾಗಿ ಹೋಟೆಲ್ ಉದ್ಯಮಿಗಳು ಅವರ ಆಶೀರ್ವಾದದಿಂದಾಗಿ ಅಭಿವೃದ್ಧಿ ಹೊಂದಿದ್ದಾರೆ. ಈ ಮಹಾಮಹಿಮರ ಜನನ, ಬಾಲ್ಯ,ಯೌವನ, ಇಳಿವಯಸ್ಸಿನಲ್ಲಿ ನಡೆದ ಘಟನೆಗಳು ,ಪವಾಡಗಳು,ಇವರ ಬಗ್ಗೆ ಜನರ ನಂಬಿಕೆಗಳ ಸುತ್ತ ಹೆಣೆದ ಕಥಾವಸ್ತು ಜೈ ಗುರುದೇವ.

ಚಿತ್ರದ ತಾರಾಗಣ ಆಯ್ಕೆ ನಡೆಯುತ್ತಿದೆ.ಸುಧಾಕರ ಬನ್ನಂಜೆ ಕತೆ- ಚಿತ್ರಕತೆ ,ಸಂಭಾಷಣೆ, ಸಾಹಿತ್ಯ ಹಾಗೂ ನಿರ್ದೇಶನ, ವಿ .ಮನೋಹರ ಸಂಗೀತ, ನಾಗರಾಜ‌ ಅಧ್ವಾನಿ ಛಾಯಾಗ್ರಹಣ, ಗಿರೀಶ್ ಕುಮಾರ್‌ ಸಂಕಲನ,ತಮ್ಮಲಕ್ಷಣ ಕಲಾ ನಿರ್ದೇಶನ,ರಾಮಕೃಷ್ಣ ಶೆಟ್ಟಿ ನಿರ್ಮಾಪಕ, ಭಾರತಿ ಶೆಟ್ಟಿ ದುಬೈ ಸಹ ನಿರ್ಮಾಪಕಿ. ಜನವರಿ ‌ಕೊನೆಯ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಕೇರಳದ ಕಾಞಂಗಾಡ್, ಉಪ್ಪಳ,ಮಂಗಳೂರು, ಉಡುಪಿ, ಬಂಟ್ವಾಳ, ಕುಂದಾಪುರ ಮುಂಬಯಿಯಲ್ಲಿ ಚಿತ್ರೀಕರಣ ನಡೆಯಲಿದೆ.ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಅವರು ಚಿತ್ರದ ಮೊದಲ ಪೋಸ್ಟರ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!