Saturday, September 25, 2021
spot_img
Homeದೇಶಮರಳಿ ಬರಲಿದೆ PUBG

ಮರಳಿ ಬರಲಿದೆ PUBG

ದಿಲ್ಲಿ, ನ. 12: ಪ್ಲೇಯರ್‌ ಅನ್‌ನೋನ್‌ ಬ್ಯಾಟಲ್‌ಗ್ರೌಂಡ್‌ ಎಂದರೆ ಏನೆಂದು ಗೊತ್ತಾಗಲಿಕ್ಕಿಲ್ಲ, ಅದನ್ನೇ ಸಂಕ್ಷಿಪ್ತಗೊಳಿಸಿ PUBG ಎಂದರೆ ಥಟ್ಟನೆ ಗೊತ್ತಾಗುತ್ತದೆ ಇದೊಂದು ಗೇಮಿಂಗ್‌ APP ಎಂದು. ಕೆಲ ಸಮಯದ ಹಿಂದೆ ಕೇಂದ್ರ ಸರಕಾರ ಯುವ ಜನತೆಯ ಅಚ್ಚುಮೆಚ್ಚಿನ ಈ ಗೇಮ್‌ ಅನ್ನು ನಿಷೇಧಿಸಿತ್ತು. ಆದರೆ ಇದೀಗ ಹೋದರೆ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ PUBG ಮರಳಿ ಬರಲು ತಯಾರಾಗುತ್ತಿದೆ.
ಭಾರತಕ್ಕೆ ವಾಪಸಾಗುವ ಸಲುವಾಗಿ PUBG ಸಬ್ಸಿಡಿಯರಿ ಕಂಪೆನಿಯೊಂದನ್ನು ಸ್ಥಾಪಿಸಲಿದೆ. ಸ್ಥಳೀಯ ಅಭಿರುಚಿಗೆ ತಕ್ಕ ವೀಡಿಯೊ ಗೇಮ್‌ ಗಳನ್ನು ಅಭಿವೃದ್ಧಿಪಡಿಸಲು PUBG 100 ಮಿಲಿಯನ್‌ ಡಾಲರ್‌ ಮೊತ್ತವನ್ನು ಭಾರತದಲ್ಲಿ ಹೂಡಿಕೆ ಮಾಡಲಿದೆ.
ಸೆಪ್ಟೆಂಬರ್‌ ತಿಂಗಳಲ್ಲಿ ಕೇಂದ್ರ ಸರಕಾರ 108 ಚೀನಿ APPಗಳನ್ನು ನಿಷೇಧಿಸಿದ್ದು, ಅದರಲ್ಲಿ PUBGಯೂ ಸೇರಿದೆ. PUBG ನಿಷೇಧಿಸಲ್ಪಟ್ಟಾಗ ಅನೇಕ ಹೆತ್ತವರು ನೆಮ್ಮದಿಯ ಉಸಿರು ಬಿಟ್ಟಿದ್ದರು. ಇದೀಗ PUBG ಮರಳಿ ಬರುತ್ತಿರುವುದು ಅನೇಕ ಮಂದಿಯ ಕಳವಳಕ್ಕೆ ಕಾರಣವಾಗಿದೆ.
ಭಾರತದ ಮಾರುಕಟ್ಟೆ ಪ್ರವೇಶಿಸುವ ಸಲುವಾಗಿ PUBG Mobile India ಎಂಬ ಹೊಸ ಗೇಮ್‌ ಟನ್ನು ಅಭಿವೃದ್ಧಿಪಡಿಸುತ್ತಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!