ಹೆಬ್ರಿ : ಕೊರೊನಾ ಜಾಗೃತಿ ಬೀದಿ ನಾಟಕ

ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ಇದರ ವತಿಯಿಂದ ನ. 12ರಂದು ಹೆಬ್ರಿಯಲ್ಲಿ ಕೊರೊನಾ ಮುಕ್ತ ಸಮಾಜಕ್ಕಾಗಿ ಬೀದಿ ನಾಟಕ ನಡೆಯಿತು.
ತಾಲೂಕು ಯೋಜನಾಧಿಕಾರಿ ಭಾಸ್ಕರ್ ವಿ. ಕಾರ್ಯಕ್ರಮ ಉದ್ಘಾಟಿಸಿ, ಕೊರೊನಾ ಮುಕ್ತ ಸಮಾಜ ನಿರ್ಮಾಣದ ಕುರಿತು ಜಾಗೃತಿ ಮೂಡಿಸುವಲ್ಲಿ ಬೀದಿ ನಾಟಕ ಹೆಚ್ಚು ಪರಿಣಾಮಕಾರಿ ಎಂದರು. ಪ್ರಗತಿ ಬಂಧು ಸ್ವಸಹಾಯ ಒಕ್ಕೂಟದ ಅಧ್ಯಕ್ಷ ರಾಜೇಶ್ ಅವರು ಅಧ್ಯಕ್ಷತೆ ವಹಿಸಿದ್ದರು.

ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್, ಲಯನ್ಸ್‌ ಕ್ಲಬ್‌ ಹೆಬ್ರಿ ಸಿಟಿ ಇದರ ಅಧ್ಯಕ್ಷ ಡಾ. ಭಾರ್ಗವಿ ಐತಾಳ್, ಸದಾಶಿವ ಶೇರಿಗಾರ್, ನರೇಂದ್ರ ನಾಯಕ್, ಸುನೀತಾ ಹೆಗ್ಡೆ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಲ್ಲಿಕಾ ಸ್ವಾಗತಿಸಿ, ವಲಯ ಮೇಲ್ವಿಚಾರಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







































error: Content is protected !!
Scroll to Top