Sunday, October 17, 2021
spot_img
Homeದೇಶಸತತ ಎರಡನೇ ಅವಧಿಯಲ್ಲಿ ಜಿಡಿಪಿ ಕುಸಿತ: ಸರಕಾರಕ್ಕೆ ಟೀಕೆಗಳ ಸುರಿಮಳೆ

ಸತತ ಎರಡನೇ ಅವಧಿಯಲ್ಲಿ ಜಿಡಿಪಿ ಕುಸಿತ: ಸರಕಾರಕ್ಕೆ ಟೀಕೆಗಳ ಸುರಿಮಳೆ

ದಿಲ್ಲಿ, ನ. 12 : ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರ್ಥಿಕ ವರ್ಷದ ಪ್ರಥಮಾರ್ಧದಲ್ಲಿ ಸತತ ಎರಡನೇ ಸಲ ಒಟ್ಟು ಆಂತರಿಕ ಉತ್ಪನ್ನ ಕುಸಿತ (ಜಿಡಿಪಿ) ಕಂಡಿದೆ. ಜುಲೈಯಿಂದ ಸೆಪ್ಟೆಂಬರ್‌ ತನಕದ ತ್ರೈಮಾಸಿಕದಲ್ಲಿ ಜಿಡಿಪಿ ಶೆ.8.6 ಕುಸಿದಿದೆ. ಆರ್‌ ಬಿಐ ಈ ಕುಸಿತಕ್ಕೆ ಕೊರೊನಾ ಕಾರಣ ಎಂದರೆ ಕಾಂಗ್ರೆಸ್‌ ನರೇಂದ್ರ ಮೋದಿಯವರ ಕೆಟ್ಟ ಆರ್ಥಿಕ ನೀತಿ ಎಂದು ಟೀಕಿಸಿದೆ.
ಆರ್‌ ಬಿಐ ನಿನ್ನೆ ಪ್ರಕಟಿಸಿದ ತ್ರೈ ಮಾಸಿಕ ಬುಲೆಟಿನ್‌ ನಲ್ಲಿ ಜಿಡಿಪಿ ಕುಸಿತದ ಸುಳಿವು ಇದೆ. ಕೇಂದ್ರ ಸರಕಾರ ಇನ್ನಷ್ಟೇ ಜಿಡಿಪಿ ದರವನ್ನು ಅಧಿಕೃತವಾಗಿ ಪ್ರಕಟಿಸಬೇಕಷ್ಟೆ. ಎಪ್ರಿಲ್‌ನಿಂದ ಜೂನ್‌ ತನಕದ ತ್ರೈಮಾಸಿಕದಲ್ಲಿ ದಾಖಲೆಯ ಶೇ.23.9 ಜಿಡಿಪಿ ಕುಸಿತವಾಗಿತ್ತು. ಕೊರೊನಾ ನಿಯಂತ್ರಿಸಲು ಲಾಕ್‌ ಡೌನ್‌ ಹೇರಿದ ಪರಿಣಾಮವಾಗಿ ಎಲ್ಲ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡ ಕಾರಣ ಆರ್ಥಿಕತೆ ಪಾತಾಳಕ್ಕಿಳಿದಿದೆ.
ಹಂತಹಂತವಾಗಿ ಲಾಕ್‌ ಡೌನ್‌ ಸಡಿಲಿಕೆಯಾದ ಬಳಿಕ ಜನಜೀವನ ಸಹಜ ಸ್ಥಿತಿಗೆ ಬಂದಿದ್ದು, ಆರ್ಥಿಕ ಚಟುವಟಿಕೆಗಳು ಬಿರುಸು ಪಡೆದುಕೊಳ್ಳುತ್ತಿವೆ. ಸರಕಾರದ ಉತ್ತೇಜಕ ಪ್ಯಾಕೇಜ್‌ ನೆರವಿನಿಂದ ಕೆಲವೇ ಸಮಯದಲ್ಲಿ ಆರ್ಥಿಕತೆ ಚೇತರಿಸಿಕೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!