ಇನ್ನೂ ಬಾರದ ಕಾಲೇಜು ಪ್ರಾರಂಭ ಆದೇಶ : ವಿದ್ಯಾರ್ಥಿಗಳು ಗೊಂದಲದಲ್ಲಿ

ಬೆಂಗಳೂರು, ನ.4 : ಪದವಿ, ಡಿಪ್ಲೊಮ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳನ್ನು ನ.17ರಿಂದ ಪ್ರಾರಂಭಿಸಿಬೇಕೆಂದು ಸರಕಾರ ಅ.28ರಂದು ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದರೂ ಇಷ್ಟರ ತನಕ ಈ ಕುರಿತು ಅಧಿಕೃತ ಆದೇಶ ಹೊರಡಿಸಿಲ್ಲ. ಇದರಿಂದಾಗಿ ಕಾಲೇಜುಗಳು ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿವೆ. ಸರಕಾರಿ ಅದೇಶ ಬಾರದ ಕಾರಣ ಕಾಲೇಜು ಪ್ರಾರಂಭಿಸಲು ತಯಾರಿ ನಡೆಸಬೇಕೋ ಬೇಡವೊ ಎಂಬ ಗೊಂದಲ ಉಂಟಾಗಿದೆ.
ಕಾಲೇಜುಗಳು ಇನ್ನೂ ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾರಂಭವಾಗುವ ತನಕ ಯಾವುದೇ ಸೂಚನೆ ನೀಡಿಲ್ಲ. ಸಮವಸ್ತ್ರ ಇತ್ಯಾದಿ ತಯಾರಿಗಳು ಆಗಿಲ್ಲ. ಈಗ ಮತ್ತೊಮ್ಮೆ ನ.17 ರಂದು ಕಾಲೇಜುಗಳು ಪ್ರಾರಂಭವಾಗುವುದೇ ಇಲ್ಲವೇ ಎಂಬ ಅನುಮಾನ ವಿದ್ಯಾರ್ಥಿಗಳನ್ನು ಕಾಡುತ್ತಿದೆ.
ಸರಕಾರ ಸ್ಟ್ಯಾಂಡರ್ಡ್‌ ಓಪರೇಟಿಂಗ್‌ ಪ್ರೊಸೀಜರ್‌ (ಎಸ್‌ಓಪಿ) ಬಿಡುಗಡೆ ಮಾಡದಿರುವುದರಿಂದ ಕಾಲೇಜುಗಳು ಇನ್ನೂ ಪುನರಾರಂಭದ ತಯಾರಿ ಶುರು ಮಾಡಿಲ್ಲ. ಎಸ್‌ಓಪಿ ವಿಳಂಬವಾದಷ್ಟೂ ಕಾಲೇಜು ಆಡಳಿತ ಮಂಡಳಿಗಳ ಕಳವಳ ಹೆಚ್ಚಾಗುತ್ತಿದೆ.
ದೂರದೂರಿನ ಹಾಗೂ ಹೊರರಾಜ್ಯಗಳ ವಿದ್ಯಾರ್ಥಿಗಳಿಗೆ ಸಾಕಷ್ಟು ಮುಂಚಿತವಾಗಿ ತರಗತಿಗಳು ಪ್ರಾರಂಭವಾಗುವ ಕುರಿತು ತಿಳಿಸಬೇಕಾಗುತ್ತದೆ. ಆದರೆ ಸರಕಾರಿ ಆದೇಶ ಇನ್ನೂ ಬಾರದ ಕಾರಣ ಎಲ್ಲರೂ ಗೊಂದಲದಲ್ಲಿದ್ದಾರೆ. ಹಾಸ್ಟೆಲ್‌ ಇತ್ಯಾದಿ ಸೌಲಭ್ಯಗಳನ್ನು ಕೊರೊನಾ ಮುಂಜಾಗರೂಕತಾ ಮಾರ್ಗಸೂಚಿ ಪ್ರಕಾರ ಸಜ್ಜುಗೊಳಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಲೇಜುಗಳ ಸರಕಾರಿ ಅದೇಶವನ್ನು ಕಾಯುತ್ತಿವೆ.















































































































































error: Content is protected !!
Scroll to Top