ಮುಂಬಯಿ, ಅ. 28: ಮಹಾರಾಷ್ಟ್ರದ ಪರ್ಭಣಿ ಲೋಕಸಭಾ ಕ್ಷೇತ್ರದ ಶಿವಸೇನೆಯ ಸಂಸದ ಸಂಜಯ್ ಜಾಧವ್ ತನ್ನ ಹತ್ಯೆಗೆ ಪ್ರಭಾವಿ ವ್ಯಕ್ತಿಯೊಬ್ಬರು 2 ಕೋ.ರೂ. ಸುಪಾರಿ ನೀಡಿದ್ದಾರೆಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಭಾವಿ ವ್ಯಕ್ತಿಯೊಬ್ಬರು ನನ್ನನ್ನು ಸಾಯಿಸಲು ನಾಂದೇಡ್ ನ ಒಂದು ಗ್ಯಾಂಗಿಗೆ 2 ಕೋ. ರೂ. ಸುಪಾರಿ ನೀಡಿರುವ ಮಾಹಿತಿ ಅ.18ರಂದೇ ಸಿಕ್ಕಿದೆ. ನನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಜಾಧವ್ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಜಾಧವ್ ಶಿವಸೇನೆಯ ಆಂತರಿಕ ತಗಾದೆಯ ಕಾರಣಕ್ಕೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರ ಮಧ್ಯಪ್ರವೇಶದ ಬಳಿಕ ರಾಜೀನಾಮಿ ಹಿಂದೆಗೆದುಕೊಂಡಿದ್ದರು.
ಸಂಸದನ ಹತ್ಯೆಗೆ 2 ಕೋ.ರೂ. ಸುಪಾರಿ!














































































