65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು,ಅ. 28 : ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಸಕ್ತ ವರ್ಷ ಕರ್ನಾಟಕವು 65ನೇ ರಾಜ್ಯೋತ್ಸವ ಆಚರಿಸುತ್ತಿದ್ದು, ಈ ಮಹತ್ವದ ಸಂದರ್ಭದ ಸಲುವಾಗಿ 65 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಾಡಿಕೆಯಂತೆ ಈ ಬಾರಿ ರಾಜ್ಯೋತ್ಸವ ದಿನವಾದ ನ.1ರಂದು ಪ್ರಶಸ್ತಿ ಪ್ರದಾನ ಮಾಡುತ್ತಿಲ್ಲ. ನವೆಂಬರ್ 7 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ಸಿ.ಟಿ ರವಿ ಪುರಸ್ಕೃತರ ಪಟ್ಟಿ ಬಿಡುಗಡೆ ವೇಳೆ ತಿಳಿಸಿದರು.
ಕ್ರೀಡಾ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲ ಕಡೆ 60 ವರ್ಷ ಮೇಲ್ಪಟ್ಟವರಿಗೆ ಪ್ರಶಸ್ತಿ ನೀಡಲಾಗಿದೆ. ಸಾಮಾಜಿಕ ನ್ಯಾಯ ಒದಗಿಸಲಾಗಿದೆ. 26 ವಿವಿಧ ಕ್ಷೇತ್ರಗಳನ್ನ ಗುರುತಿಸಿಲಾಗಿದ್ದು, ಅನೇಕ ಶಿಫಾರಸ್ಸು ಬಂದಿದ್ದರೂ ಅರ್ಹತೆ ಗಮನಿಸಿ ಪ್ರಶಸ್ತಿ ನೀಡಲಾಗಿದೆ. ಪ್ರತಿ ಜಿಲ್ಲೆಗೂ ಒಂದಾದರೂ ರಾಜ್ಯೋತ್ಸವ ಪ್ರಶಸ್ತಿ ಇರಬೇಕು ಎಂಬುದನ್ನು ಪರಿಗಣಿಸಲಾಗಿದೆ.
ಬಿಜೆಪಿ ಮತ್ತು ಆರ್ ಎಸ್ ಎಸ್ ಪೋಷಿತವಾದ ಯುವ ಬ್ರಿಗೇಡ್‌ ಕೂಡ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಸಂಘ ಸಂಸ್ಥೆ ಕ್ಷೇತ್ರದಲ್ಲಿ ಸಾಧನೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನಿಯಮ ಮೀರಿ ಪ್ರಶಸ್ತಿ ಕೊಟ್ಟಿಲ್ಲ. ಆರ್ ಎಸ್ ಎಸ್ ಪೋಷಿತ ಆಗಿರುವುದಕ್ಕೆ ಪ್ರಶಸ್ತಿ ಕೊಡಬಾರದು ಎಂದೇನೂ ಇಲ್ಲ. ಸಂಘದ ಸೇವೆಯನ್ನು ಪರಿಗಣಿಸಿ ಕೊಟ್ಟಿದ್ದೇವೆ. ಈ ವಿಚಾರವಾಗಿ ಯಾರಿಂದಲೂ ಒತ್ತಡ ಬಂದಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ ಆಯ್ಕೆಯಾದವರ ವಿವರ ಇಲ್ಲಿದೆ.
ಸಾಹಿತ್ಯ ಕ್ಷೇತ್ರ
ವಲೇರಿಯನ್ ಡಿಸೋಜ (ವಲ್ಲಿವಗ್ಗ), ದಕ್ಷಿಣ ಕನ್ನಡ
ಸಂಗೀತ ಕ್ಷೇತ್ರ
ಕೆ ಲಿಂಗಪ್ಪ ಶೇರಿಗಾರ ಕಟೀಲು, ದಕ್ಷಿಣ ಕನ್ನಡ
ನ್ಯಾಯಾಂಗ
ಎಂ.ಕೆ. ವಿಜಯಕುಮಾರ್, ಕಾರ್ಕಳ
ಹೊರನಾಡು ಕನ್ನಡಿಗರು
ಕುಸುಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ, ದಕ್ಷಿಣ ಕನ್ನಡ
ಸಂಘ ಸಂಸ್ಥೆ, ಸಮಾಜಸೇವೆ
ಧರ್ಮೋತ್ಥಾನ ಟ್ರಸ್ಟ್‌, ಧರ್ಮಸ್ಥಳ, ದಕ್ಷಿಣ ಕನ್ನಡ
ಸಮಾಜಸೇವೆ
ಮಣೆಗಾರ್ ಮೀರಾನ್ ಸಾಹೇಬ್, ಉಡುಪಿ
ವಿಜ್ಞಾನ/ತಂತ್ರಜ್ಞಾನ
ಪ್ರೊ. ಉಡುಪಿ ಶ್ರೀನಿವಾಸ, ಉಡುಪಿ
ಯಕ್ಷಗಾನ
ಎಂ.ಕೆ. ರಮೇಶ್ ಆಚಾರ್ಯ, ಶಿವಮೊಗ್ಗ































































































































































error: Content is protected !!
Scroll to Top