ಭಟ್ಕಳದ ದೇವಿ ದೇವಸ್ಥಾನದ 40 ಲ.ರೂ. ಮೌಲ್ಯದ ಆಭರಣ ಕಳವು; ಅರ್ಚಕನ ಮೇಲೆ ಅನುಮಾನ

ಭಟ್ಕಳ, ಅ. 20 : ಇಲ್ಲಿನ ದುರ್ಗಪರಮೇಶ್ವರಿ ದೇವಸ್ಥಾನದ  ಸುಮಾರು 40 ಲಕ್ಷ ರೂ. ಮೌಲ್ಯದ ಆಭರಣಗಳು ಕಳುವಾಗಿರುವ ಘಟನೆ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.  ಆಭರಣ ನಾಪತ್ತೆಯಾಗಿರುವುದು ಬಹಿರಂಗವಾದ ಬಳಿಕ  ದೇವಾಲಯದ ಅರ್ಚಕ ಸಹ ನಾಪತ್ತೆಯಾಗಿದ್ದಾರೆ  ಎಂದು ದೇವಾಲಯದ ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ.

ನಾಪತ್ತೆಯಾದ ಅರ್ಚಕನನ್ನು ಯೆಲ್ಲಾಪುರ ನಿವಾಸಿ ಸತೀಶ್ ಭಟ್ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ದೇವರಿಗೆ ನವರಾತ್ರಿ ಸಮಯ ಆಭರಣಗಳನ್ನು ತೊಡಿಸಲು ದೇವಾಲಯದ ಪ್ರಧಾನ ಅರ್ಚಕರು ಆಭರಣ ಪೆಟ್ಟಿಗೆಯನ್ನು ತೆರೆದಾಗ ಈ ಘಟನೆ ಬೆಳಕಿಗೆ ಬಂದಿದೆ. ಆಭರಣ ಲಾಕರ್‌ನ ಕೀಲಿಗಳನ್ನು ಹೊಂದಿದ್ದ ಕಾರಣ ದೇವಾಲಯದ ಅಧಿಕಾರಿಗಳು ಸತೀಶ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಸತೀಶ್ ಸಂಪರ್ಕ ಸಾಧ್ಯವಾಗಿಲ್ಲ. ಆಗ ದೇವಸ್ಥಾನ ಆಡಳಿತ ಮಂಡಳಿ ಲಾಕರ್ ತೆರೆಯಲು ನಿರ್ಧರಿಸಿದೆ.   ಸತೀಶ್ ಕಳೆದ ವರ್ಷ ದೇವಸ್ಥಾನದ ಕೆಲಸಕ್ಕೆ ಸೇರಿದ್ದರು. ಆದರೆ ಕಳೆದೊಂದು ತಿಂಗಳಿನಿಂದ ಕರ್ತವ್ಯಕ್ಕೆ ಬಂದಿರಲಿಲ್ಲ.ಸತೀಶ್ ಭಟ್ ಪತ್ತೆಗಾಗಿ ಯೆಲ್ಲಾಪುರ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.































































































































































error: Content is protected !!
Scroll to Top