ಮಂಗಳೂರು, ಅ.19 : ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಹೊಟೇಲ್ ಉದ್ಯಮಿ ಮನೀಷ್ ಶೆಟ್ಟಿ ಹತ್ಯೆಯ ಹೊಣೆಯನ್ನು ಭೂಗತ ಜಗತ್ತಿನ ವಿಕ್ಕಿ ಶೆಟ್ಟಿ ಎಂದು ಹೇಳಿಕೊಂಡಿರುವ ವ್ಯಕ್ತಿ ವಹಿಸಿಕೊಂಡಿದ್ದಾನೆ. ಮಂಗಳೂರಿನ ಖಾಸಗಿ ವಾಹಿನಿಯೊಂದಕ್ಕೆ ಕರೆ ಮಾಡಿರುವ ವಿಕ್ಕಿ ಶೆಟ್ಟಿ ಹಿರಿಯಡ್ಕದಲ್ಲಿ ನಡೆದ ಇನ್ನಾದ ಕಿಶನ್ ಹೆಗ್ಡೆ ಹತ್ಯೆಗೆ ಪ್ರತೀಕಾರವಾವಾಗಿ ಮನೀಷ್ ಶೆಟ್ಟಿಯನ್ನು ನನ್ನ ಹುಡುಗರು ಸಾಯಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ.
ಕಿಶನ್ ಹೆಗ್ದೆ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಕೋಡಿಕೆರೆ ಮನೋಜ್‌ಗೆ ಬಾಸ್ ಆಗಿದ್ದ. ಹೀಗಾಗಿ ಮನೀಷ್ ಶೆಟ್ಟಿಯನ್ನು ಸಾಯಿಸಿದ್ದೇವೆ. ಕಿಶನ್ ಹೆಗ್ಡೆಯನ್ನು ಹತ್ಯೆ ಮಾಡಿ ಕೋಡಿಕೆರೆ ಮನೋಜ್ ತಪ್ಪು ಮಾಡಿದ್ದಾನೆ. ನನ್ನ ಹುಡುಗರ ತಂಟೆಗೆ ಬಂದರೆ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿಕೊಂಡಿದ್ದಾನೆ.






































































