ಪ್ಯಾಂಟ್ರಿ ಕಾರ್‌ಗಳನ್ನು ಕಳಚಲಿದೆ ರೈಲ್ವೇ

ದಿಲ್ಲಿ, ಅ. 19: ರೈಲುಗಳಲ್ಲಿ  ಪ್ರಯಾಣಿಕರಿಗೆ ಆಹಾರ ತಯಾರಿಸಿ ಕೊಡುವ ಪ್ಯಾಂಟ್ರಿ ಕಾರ್‌ಗಳನ್ನು ರದ್ದುಪಡಿಸಲು ರೈಲ್ವೇ ನಿರ್ಧರಿಸಿದೆ.  ಪ್ಯಾಂಟ್ರಿ ಕಾರ್‌ ಬದಲಾಗಿ ಆ ಜಾಗಕ್ಕೆ 3 ಟಯರ್‌ ಎಸಿ ಬೋಗಿಗಳನ್ನು ಜೋಡಿಸಲಾಗುವುದು.

ಕೊರೊನಾ ಕಾಲದಲ್ಲಿ  ರೈಲ್ವೇ ಪ್ಯಾಂಟ್ರಿ ಕಾರ್‌ ರಹಿತ ರೈಲುಗಳನ್ನು ಓಡಿಸಿದೆ. ಇದರಿಂದಾಗಿ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾದ ಕುರಿತು ದೂರುಗಳು ಬಂದಿಲ್ಲ. ಹೀಗಾಗಿ ರೈಲು ಸಂಚಾರ ಸಹಜ ಸ್ಥಿತಿಗೆ ಬಂದ ಬಳಿಕ ಪ್ಯಾಂಟ್ರಿ ಕಾರ್‌ಗಳನ್ನು ಖಾಯಂ ಆಗಿ ಕಳಚಲು ರೈಲ್ವೇ ನಿರ್ಧರಿಸಿದೆ. ಪ್ಯಾಂಟ್ರಿ ಕಾರ್‌ ಬದಲಾಗಿ ಎಸಿ  3 ಟಯರ್‌ ಕೋಚ್‌ಗಳನ್ನು ಜೋಡಿಸಿದರೆ ರೈಲ್ವೇಗೆ ವಾರ್ಷಿಕ 1,400 ಕೋ.ರೂ. ಹೆಚ್ಚುವರಿ ಆದಾಯ ಹರಿದು ಬರಲಿದೆ.

ಪ್ರಸ್ತುತ ಸುಮಾರು 350 ರೈಲುಗಳಲ್ಲಿ ಪ್ಯಾಂಟ್ರಿ ಕಾರ್‌ಗಳಿವೆ. ಇವೆಲ್ಲ ಗುತ್ತಿಗೆ ಆಧಾರದ ಮೇಲೆ ನಡೆಯುವ ಪ್ಯಾಂಟ್ರಿ ಕಾರ್‌ಗಳು. ಹೀಗಾಗಿ ಇವುಗಳನ್ನು ರದ್ದುಪಡಿಸಿದರೆ ರೈಲ್ವೇಗೆ ಯಾವುದೇ ನಷ್ಟವಾಗುವುದಿಲ್ಲ. ಆದರೆ ಸಾವಿರಾರು ಗುತ್ತಿಗೆ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಾರೆ.

ಇ-ಕ್ಯಾಟರಿಂಗ್‌ ಸೌಲಭ್ಯ ಇರುವುದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುವುದಿಲ್ಲ. ಅಲ್ಲದೆ ಪ್ರಮುಖ ನಿಲ್ದಾಣಗಳಲ್ಲಿ ಬೇಸ್‌ ಕಿಚನ್ ಗಳಲ್ಲಿ ತಯಾರಿಸಿದ ಆಹಾರ ಪೂರೈಸುವ ವ್ಯವಸ್ಥೆಯಿರುತ್ತದೆ ಎಂದು ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವವರಿಗೆ ದಿಂಬು ಮತ್ತು ಹೊದಿಕೆ ಪೂರೈಸುವ ಸೇವೆ ಈಗಾಗಲೇ ಸ್ಥಗಿತಗೊಂಡಿದೆ. ಈ ವ್ಯವಸ್ಥೆ ಕೊರೊನಾ ನಂತರವೂ ಮುಂದುವರಿಯಲಿದೆ.















































































































































error: Content is protected !!
Scroll to Top