ಹೆಲ್ಮೆಟ್‌ ಧರಿಸದಿದ್ದರೆ 3 ತಿಂಗಳು ಲೈಸೆನ್ಸ್‌ ರದ್ದು; ಹಿಂಬದಿ ಸವಾರರಿಗೂ ಕಡ್ಡಾಯ

ಬೆಂಗಳೂರು, ಅ. 19: ಸರಕಾರ ದ್ವಿಚಕ್ರ ವಾಹನ ಸವಾರರ ಹೆಲ್ಮೆಟ್‌ ನಿಯಮವನ್ನು ಇನ್ನಷ್ಟು ಬಿಗುಗೊಳಿಸಿದೆ. ಇನ್ನು ಮುಂದೆ ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದರೆ ದಂಡ ಮಾತ್ರವಲ್ಲದೆ ಮೂರು ತಿಂಗಳು ಲೈಸೆನ್ಸ್‌ ಕೂಡ ರದ್ದಾಗುತ್ತದೆ. ಸವಾರರ ಜೊತೆಗೆ ಹಿಂಬದಿ ಸವಾರರೂ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ.

ಕಳೆದ ವರ್ಷ ಜಾರಿಗೆ ಬಂದಿರುವ ಹೊಸ ಮೋಟಾರು ವಾಹನ ಕಾಯಿದೆಯಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು ಹಾಗೂ ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಇದರ  ಹೊರತಾಗಿಯೂ ಜನರು ಹೆಲ್ಮೆಟ್‌ ಧರಿಸಲು ಅಸಡ್ಡೆ ತೋರಿಸುತ್ತಿರುವುದರಿಂದ ಸರಕಾರದ ಆದೇಶವನ್ನನುಸರಿಸಿ ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಪ್ರಕಾರ ಹಿಂಬದಿ ಸವಾರರೂ ಹೆಲ್ಮೆಟ್‌ ಧರಿಸುವುದು ಕಡ್ಡಾಯ. ಈ ಕಾನೂನು ಉಲ್ಲಂಘಿಸಿದರೆ ಮೂರು ತಿಂಗಳ ಮಟ್ಟಿಗೆ ಲೈಸೆನ್ಸ್‌ ರದ್ದಾಗುತ್ತದೆ.















































































































































error: Content is protected !!
Scroll to Top