ಬೆಂಗಳೂರಿನಲ್ಲಿ ಮಂಗಳೂರಿನ ಉದ್ಯಮಿಯನ್ನು ಗುಂಡು ಹಾರಿಸಿ ಹತ್ಯೆ

ಬೆಂಗಳೂರು, ಅ. 16: ಮಂಗಳೂರು ಮೂಲದ ಉದ್ಯಮಿಯೊಬ್ಬರನ್ನು ಬೆಂಗಳೂರಿನಲ್ಲಿ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಬೆಂಗಳೂರಿನ ಬ್ರಿಗೇಡ್‌ ರೋಡ್‌ ನಲ್ಲಿರುವ ಡುಯೆಟ್‌ ಲೇಡಿಸ್‌ ಪಬ್‌ನ ಮಾಲಕ ಮನೀಷ್‌ ಶೆಟ್ಟಿ ಕೊಲೆಯಾದವರು. ಮಂಗಳೂರಿನವರಾದ ಮನೀಷ್‌  ಶೆಟ್ಟಿಯವರು ಭೂಗತ ಜಗತ್ತಿನ ಬನ್ನಂಜೆ ರಾಜನಿಗೆ ಆಪ್ತನಾಗಿದ್ದರು ಎನ್ನಲಾಗಿದೆ.   ಚೆಮ್ಮನ್ನೂರು ಜುವೆಲ್ಲರಿ ದರೋಡೆ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದರು.

ಸುಮಾರು 9 ಗಂಟೆ ಹೊತ್ತಿಗೆ ಬೈಕ್‌ ನಲ್ಲಿ ಬಂದ ದುಷ್ಕರ್ಮಿಗಳು ರೆಸ್ಟ್‌ ಹೌಸ್‌ ಪಾರ್ಕ್‌ ಬಳಿ  ಡಬಲ್‌ ಬ್ಯಾರಲ್‌ ಗನ್‌ ನಿಂದ ಮನೀಷ್‌ ಶೆಟ್ಟಿಯವರ ಮೇಲೆ ಗುಂಡು ಹಾರಿಸಿದ್ದಾರೆ.







































































































































error: Content is protected !!
Scroll to Top