ಕಾರು ಹೊಳೆಗೆ ಉರುಳಿ ಬಿದ್ದು ನಾಲ್ವರ ದುರ್ಮರಣ

ಉಡುಪಿ, ಅ.16: ಸಿದ್ದಾಪುರ ತಾಲೂಕಿನ ಕೋಡನಮನೆ ಸೇತುವೆ ಬಳಿ ಕಾರು ಹೊಳೆಗೆ ಉರುಳಿ ಬಿದ್ದು ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಬುಧವಾರ ರಾತ್ರಿ  ಸಂಭವಿಸಿದೆ.

ಮೃತಪಟ್ಟವರೆಲ್ಲ ಹುಬ್ಬಳ್ಳಿಯವರು. ಸ್ನೇಹಿತನ ಮನೆಗೆ ಬಂದು ವಾಪಾಸು ಹೋಗುವ ವೇಳೆ ಈ ಅಪಘಾತ ಸಂಭವಿಸಿದೆ. ಮೃತರನ್ನು  ನಿಶ್ಚಲ (20 ),ರೋಶನ್‌, (20 ), ಸುಷ್ಮಾ (20 ) ಮತ್ತು ಅಕ್ಷತಾ ಹಿರೇಮಠ (21 ) ಎಂದು ಗುರುತಿಸಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಳೆಗೆ ಬಿದ್ದಿದೆ. ಭಾರಿ ಮಳೆಯ ಕಾರಣ ನೀರು ತುಂಬಿ ಹರಿಯುತ್ತಿದ್ದುದರಿಂದ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ನೀರು ಕಡಿಮೆಯಾದ ಬಳಿಕ ಕಾರು ಕಂಡಿದೆ. ಮೂರು ಶವಗಳು ನಿನ್ನೆಯೇ ಸಿಕ್ಕಿವೆ. ಇನ್ನೊಂದು ಶವಕ್ಕಾಗಿ ಹುಡುಕಾಟ ನಡೆದಿದೆ.







































































































































error: Content is protected !!
Scroll to Top