ಉಡುಪಿ, ಅ.16: ರಾಷ್ಟ್ರೀಯ ಹೆದ್ದಾರಿಯಲ್ಲಿ ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ಓಮ್ನಿ ಕಾರನ್ನು ಬೆನ್ನಟ್ಟಿಕೊಂಡು ಹೋದ ಬೈಂದೂರು ವೃತ್ತ ನಿರೀಕ್ಷಕರ ಜೀಪು ಪಲ್ಟಿಯಾಗಿ ವೃತ್ತ ನಿರೀಕ್ಷಕ ಮತ್ತು ಚಾಲಕ ಗಾಯಗೊಂಡಿರುವ ಘಟನೆ ತಡರಾತ್ರಿ ಸಂಭವಿಸಿದೆ.
ಒತ್ತಿನೆಣೆ ಸಮೀಪ ರಾತ್ರಿ ಒಂದು ಗಂಟೆ ಹೊತ್ತಿಗೆ ಬೀಟ್ ನಲ್ಲಿರುವ ವೇಳೆ ವೃತ್ತ ನಿರೀಕ್ಷಕರ ಜೀಪನ್ನು ಕಂಡು ಓಮ್ನಿ ಕಾರು ಪಲಾಯನ ಮಾಡಲೆತ್ನಿಸಿತು. ಇದರಿಂದ ಅನುಮಾನಗೊಂಡ ವೃತ್ತ ನಿರೀಕ್ಷಕರು ಓಮ್ನಿಯನ್ನು ಬೆನ್ನಟ್ಟಲು ಚಾಲಕನಿಗೆ ಹೇಳಿದರು. ಆದರೆ ರಾಘವೇಂದ್ರ ಮಠದ ಬಳಿ ಜೀಪು ಪಲ್ಟಿಯಾಗಿ ವೃತ್ತ ನಿರೀಕ್ಷಕ ಸುರೇಶ್ ನಾಯ್ಕ್ ಮತ್ತು ಚಾಲಕ ಹೇಮರಾಜ್ ಗಾಯಗೊಂಡಿದ್ದಾರೆ. ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.


































































