ಕೊರೊನಾ ಸೋಂಕಿಗೆ ತುತ್ತಾಗಿದ್ದ ಶಿರ್ತಾಡಿಯ ಶಿಕ್ಷಕಿ ಪದ್ಮಾಕ್ಷಿ ವಿಧಿವಶ

ಮೂಡುಬಿದಿರೆ, ಅ.16: ಕೊರೊನಾ ಸೋಂಕಿತರಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಶಿರ್ತಾಡಿ ಮಕ್ಕಿಯ ಜವಹಾರ್ ಲಾಲ್ ನೆಹರೂ ಅನುದಾನಿತ ಪ್ರೌಢಶಾಲೆಯ  ಶಿಕ್ಷಕಿ ಪದ್ಮಾಕ್ಷಿ ಅವರು ಚಿಕಿತ್ಸೆ ಫಲಿಸದೆ ಇಂದು ನಿಧನರಾದರು.

ಪದ್ಮಾಕ್ಷಿಯವರು ಒಮ್ಮೆ ಚೇತರಿಸಿಕೊಂಡರೂ ನಿನ್ನೆ ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಹೆಲಿಕಾಪ್ಟರ್‌ ನಲ್ಲಿ ಕರೆದೊಯ್ಯುವ ಕುರಿತ ಮಾತುಕತೆಯಾಗುತ್ತಿತ್ತ. ಆದರೆ ಅದಕ್ಕೂ ಮೊದಲು ಪದ್ಮಾಕ್ಷಿಯವರು ವಿಧಿವಶರಾದರು.

ಪದ್ಮಾಕ್ಷಿಯವರ ಜೊತೆಗೆ ಅವರ ಪತಿ ಮತ್ತು ಮಗನಿಗೂ ಕೊರೊನಾ ಸೋಂಕು ತಗಲಿತ್ತು. ಹೀಗೆ ಶಿಕ್ಷಕಿಯ ಇಡೀ ಕುಟುಂಬ ಕೊರೊನಾ ಸೋಂಕಿಗೆ ತುತ್ತಾದ ವಿಷಯ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಶಿಕ್ಷಕ ದಂಪತಿಯ ಮಗಳು ಮಾಡಿದ ಮನವಿಗೆ ಸ್ಪಂದಿಸಿ ಸರಕಾರ ಅವರ ಆಸ್ಪತ್ರೆಯ ಖರ್ಚುವೆಚ್ಚಗಳನ್ನು ಭರಿಸಲು ಆದೇಶಿಸಿತ್ತು. ಶಾಸಕ ಉಮಾನಾಥ ಕೋಟ್ಯಾನ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸೇರಿ ಹಲವರು ಕುಟುಂಬಕ್ಕೆ ನೆರವಾಗಲು ಪದ್ಮಾಕ್ಷಿಯವರ ಪುತ್ರಿ ಐಶ್ವರ್ಯಾ ಮಾಡಿದ ಮನವಿಗೆ ಪ್ರತಿಸ್ಪಂದಿಸಿದ್ದರು. ವಿದ್ಯಾಗಮಕ್ಕಾಗಿ ವಿವಿಧೆಡೆಗೆ ಹೋಗುತ್ತಿದ್ದ ಪದ್ಮಾಕ್ಷಿಯವರಿಗೆ ಈ ಸಂದರ್ಭದಲ್ಲಿ ಕೊರೊನಾ ಸೋಂಕು ತಗಲಿದೆ ಎನ್ನಲಾಗುತ್ತಿದೆ.









































































































































































error: Content is protected !!
Scroll to Top