ಕಳೆದ ಆರೇಳು ತಿಂಗಳಿಂದ ಬಾಧಿಸುತ್ತಿರುವ ಹಾಗೂ ನಿತ್ಯವೂ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ಹರಡದಂತೆ ತಡೆಗಟ್ಟುವುದು ಸರ್ಕಾರದ ಮೊದಲ ಆದ್ಯತೆ ಆಗಿರಬೇಕು .ಈ ಬಗ್ಗೆ ಇಲ್ಲಿಯ ತನಕ ಕೈಗೊಳ್ಳಲಾದ ಕ್ರಮಗಳ ಅವಲೋಕನ ಹಾಗೂ ಮುಂದೆ ತ್ವರಿತಗೊಳಿಸಬೇಕಾದ ಕ್ರಮಗಳ ಬಗ್ಗೆ ಚಿಂತನೆ ಅಗತ್ಯ. ಇಲ್ಲಿ ಗಮನಾರ್ಹವಾದ ವಿಚಾರವೆಂದರೆ ಹಿಂದೆ ಅಳವಡಿಸಿದ ಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಂಡಿದೆಯೇ ಎಂಬ ಪರಾಮಶೆ೯ ಮುಖ್ಯ. ಈ ನಿಟ್ಟಿನಲ್ಲಿ ವಿವೇಚಿಸುವಾಗ ಕೊರೊನಾ ಪತ್ತೆಹಚ್ಚುವ ಬಗ್ಗೆ ನಡೆಸುವ ಪ್ರಯೋಗಾಲಯ ಪರೀಕ್ಷೆಗಳ ಘೋಷಣೆಯಲ್ಲಿ ವಿಳಂಬವಾಗುತ್ತಿದೆ ಎಂಬ ಅನುಮಾನ ಕಾಡುತ್ತಿದೆ.
ಇಲ್ಲಿ ಪ್ರಯೋಗಾಲಯ ಪರೀಕ್ಷೆಗಳ ಫಲಿತಾಂಶ ಎಷ್ಟು ಕ್ಷಿಪ್ರವಾಗಿ ಘೋಷಣೆ ಆಗುತ್ತದೋ ಅದೇ ವೇಗದಲ್ಲಿ ಶಂಕಿತ ಸಂಪರ್ಕಿತರ ಚೇಸಿಂಗ್ ಮಾಡಲುಸಾಧ್ಯ. ಮಾದರಿ ಸಂಗ್ರಹಣೆ ಮಾಡಿದ ದಿನವೇ ಪರೀಕ್ಷಾ ವಿಧಿಗಳನ್ನು ಪೂರೈಸಿ ಫಲಿತಾಂಶ ಮಾರನೇ ದಿನವೇ ಪ್ರಕಟಿಸಲು ಸಾಧ್ಯವಾದರೆ ಅತ್ಯುತ್ತಮ. ಶಂಕಿತರು ರೋಗ ಹರಡುವ ಅವಕಾಶ ಬಹಳಷ್ಟು ಕಡಿಮೆಯಾಗುತ್ತದೆ. ಈ ಅವಧಿ ವಿಳಂಬವಾದ ಹಾಗೆ ಸೋಂಕಿತರಿಂದ ಹಾಗೂ ಶಂಕಿತರಿಂದ ರೋಗ ಹರಡುವಿಕೆಯ ಅವಕಾಶ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.ಪರೀಕ್ಷಾ ಫಲಿತಾಂಶ ಬೇಗ ಪ್ರಕಟಿಸುವ ವ್ಯವಸ್ಥೆ ಕೊರೊನಾ ತಡೆಗಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಪತ್ರಿಕೆಗಳು ಹಾಗೂ ಟಿವಿ ಚಾನಲ್ ಗಳು ಕೊರೊನ ಸಂಬಂಧಿತ ಅಂಕಿಅಂಶಗಳನ್ನು ಪದೇಪದೆ ಹೇಳುತ್ತವೆ. ಮೇಲೆ ಪ್ರಸ್ತಾಪಿಸಿದ ಅಂಶದ ಬಗ್ಗೆ ಬೆಳಕು ಚೆಲ್ಲುವುದಿಲ್ಲ. ಆದರೆ ಅದು ಸೋಂಕು ನಿಯಂತ್ರಣದಲ್ಲಿ ಅತಿ ಮುಖ್ಯ.
ಈ ಬಗ್ಗೆ ಸರ್ಕಾರ ಪ್ರಯೋಗಾಲಯಗಳ ಸಂಖ್ಯೆ ಮತ್ತು ಸಾಮರ್ಥ್ಯ ಹೆಚ್ಚಿಸಬೇಕು. ಪ್ರಯೋಗಾಲಯಗಳ ಕ್ಷೇತ್ರ ಪರಿಣತಿ ಉಳ್ಳವರ ಅಭಿಪ್ರಾಯದಂತೆ RTPCR test is confirmative. ಈ ಪರೀಕ್ಷಾ ವಿಧಾನಕ್ಕೆ ಸುಮಾರು ಐದು ಗಂಟೆಗಳ ಕಾಲ ತಗಲುತ್ತದೆ. ಹಾಗೆ ಒಂದು ಆವರ್ತದಲ್ಲಿ 75ರಷ್ಟು ಮಾದರಿಯನ್ನು ಪರೀಕ್ಷೆಗೆ ಅಳವಡಿಸಬಹುದಾದ ಅವಕಾಶವಿರುತ್ತದೆ. ಈ ಅಂದಾಜಿನಲ್ಲಿ ಜಿಲ್ಲೆ ಅಥವಾ ಆಯಾ ಕ್ಷೇತ್ರದ ಬೇಡಿಕೆ ಅನುಗುಣವಾಗಿ ಪ್ರಯೋಗಶಾಲೆಗಳ ಬಲವರ್ಧನೆ ಕೊರೊನ ನಿಯಂತ್ರಣದಲ್ಲಿ ಒಂದು ಮೈಲಿಗಲ್ಲಾದೀತು.

ಸರ್ಕಾರ ತಕ್ಷಣವೇ ಈ ಬಗ್ಗೆ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಬೇಸರದ ಸಂಗತಿಯೆಂದರೆ ಸರ್ಕಾರದ ಕ್ರಾಂತಿಕಾರಿ ನಡೆಗೆ ಇಂಥ ಸಂದರ್ಭದಲ್ಲಿಯೂ ಮುಂದಾಗಲು ಮೀನಾಮೇಷ ಮಾಡುತ್ತದೆ. ಈಗ ಆರೋಗ್ಯ ಇಲಾಖೆಯಲ್ಲಿ ಯಾವ ಕಾರಣಕ್ಕೂ ಸಿಬ್ಬಂದಿ ಕೊರತೆ ಆಗಬಾರದು. ಆದರೆ NMH ಸಿಬ್ಬಂದಿಗಳು ಕಳೆದ ಅನೇಕ ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರ ನಿರತರನ್ನು ಕರೆದು ಸಂಧಾನ ಅಥವಾ ಇನ್ಯಾವ ವಿಧಾನದಿಂದ ಮನವೊಲಿಸಿ ಮುಷ್ಕರ ನಿಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಅದೇನು ಅಸಾಧ್ಯದ ಮಾತೇ! ಬಾರ್ಡರ್ ಡಿಸ್ಪ್ಯೂಟೇ!ಅಂದರೆ ಆರೋಗ್ಯದ ವಿಚಾರದಲ್ಲೂ ಸರ್ಕಾರಕ್ಕೆ ಬದ್ಧತೆ ಇಲ್ಲವೆಂದೇ ಹೇಳಬೇಕು. ಇನ್ನಾದರೂ ಸರ್ಕಾರ ಸಾರ್ವಜನಿಕ ಸಾರ್ವಜನಿಕರ ಹಿತಾಸಕ್ತಿಯಿಂದ ಅಗತ್ಯದ ಸೂಕ್ತ ಕ್ರಮ ಕೈಗೊಳ್ಳಲಿ
ಬೇಳೂರು ರಾಘವ ಶೆಟ್ಟಿ








































































