ಧೋನಿ ಮಗಳಿಗೆ ಅತ್ಯಾಚಾರದ ಬೆದರಿಕೆಯೊಡ್ಡಿದ ವ್ಯಕ್ತಿಗಾಗಿ ಶೋಧ

ದಿಲ್ಲಿ, ಅ. 10: ಕ್ರಿಕೆಟ್‌ನ ಹುಚ್ಚು ಅಭಿಮಾನಿಗಳ ಅತಿರೇಕಗಳು ಕೆಲವೊಮ್ಮೆ ವಿಪರೀತಕ್ಕೆ ತಿರುಗುತ್ತವೆ. ಐಪಿಎಲ್‌ನಲ್ಲಿ ಸತತವಾಗಿ ಹಿನ್ನಡೆ ಅನುಭವಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿಯನ್ನು ಟೀಕಿಸುವ ಭರದಲ್ಲಿ  ಈ ತಂಡದ ಅಭಿಮಾನಿಯೊಬ್ಬ ಧೋನಿಯ ಆರು ವರ್ಷದ ಪುತ್ರಿ ಜೀವಾಳನ್ನು ಅತ್ಯಾಚಾರ ಮಾಡುತ್ತೇನೆ ಎಂದು ಹೇಳಿಕೊಂಡು ಈಗ ಸೋಷಿಯಲ್‌ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಉಗಿಸಿಕೊಂಡಿದ್ದಾನೆ.  

ಭಾರತ ಹೇಳಿ ಕೇಳಿ ಕ್ರಿಕೆಟ್ ಪ್ರೇಮಿಗಳ ರಾಷ್ಟ್ರ. ಇಲ್ಲಿ ಕ್ರಿಕೆಟ್ ಪ್ರತೀ ಒಬ್ಬರ ಹೃದಯದ ಬಡಿತ ಆಗಿ ಬಿಟ್ಟಿದೆ. ಕ್ರಿಕೆಟಿಗರನ್ನು ಆರಾಧನೆ ಮಾಡುವುದು, ಗೆದ್ದಾಗ ಅವರನ್ನು ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುವುದು, ಸೋತಾಗ ಹೊತ್ತು ಹಾಕುವುದು ಇದ್ದೇ ಇದೆ. ಅದು ತಪ್ಪು ಖಂಡಿತ ಅಲ್ಲ. ಆದರೆ ಐಪಿಲ್ ಪಂದ್ಯಗಳಲ್ಲಿ ಸತತವಾಗಿ ಸೋಲುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ವಿರುದ್ಧ ಅಭಿಮಾನಿ ಮಾಡಿದ್ದು ಅತಿರೇಕದ ಟ್ವೀಟ್. ಪೊಲೀಸರು ಈಗ ಆತನ ಶೋಧ ನಡೆಸಿದ್ದಾರೆ. ಇದು ಅತಿರೇಕ ಎಂದು ನಿಮಗೆ ಅನ್ನಿಸುವುದಿಲ್ಲವೇ?ಈ ರೀತಿಯ ಕುರುಡು ಅಭಿಮಾನಿಗಳು ಬೇಕಾ?















































































error: Content is protected !!
Scroll to Top