ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ನಿಂದ ಪ್ರತಿಭಟನೆ

ಕಾರ್ಕಳ : ಹಾಥ್ರಸ್‌ ಹಗರಣ ಈ ದೇಶದ ದುರಂತವಾಗಿದ್ದು, ಮನುವಾದಿ ಆಡಳಿತ ವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದು ಎಂದು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಶೇಖರ್‌ ಮಡಿವಾಳ್‌ ಹೇಳಿದರು.
ಅವರು ಅ. 6ರಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ನಡೆದ ಹಾಥ್ರಸ್‌ ಹಗರಣದಲ್ಲಿ ದಲಿತ ಹೆಣ್ಣು ಮಗಳ ರೇಪ್ ಮತ್ತು ಮರ್ಡರ್, ಸಂತ್ರಸ್ತ ಕುಟುಂಬದ ಸಾಂತ್ವನಕ್ಕೆ ಹೊರಟ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಯವರ ಬಂಧನ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್‌ ರವರ ಮನೆಯ ಮೇಲೆ ಸಿಬಿಐ ರಾಜಕೀಯ ಪ್ರೇರಿತ ದಾಳಿ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸರಕಾರಕ್ಕೆ ಶೋಭೆಯಲ್ಲ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆಯ ಮೇಲೆ ರಾಜಕೀಯ ಪ್ರೇರಿತವಾಗಿ ಸಿಬಿಐ ದಾಳಿಯಾಗಿದೆ. ವಿರೋಧ ಪಕ್ಷದ ನಾಯಕರನ್ಮು ಈ ರೀತಿ ವ್ಯವಸ್ಥಿತವಾಗಿ ಧಮನಿಸುವ ಕೆಲಸ ನಡೆಯುತ್ತಿರುವುದು ಸರಕಾರಕ್ಕೆ ಶೋಭೆಯಲ್ಲ ಎಂದವರು ಅಭಿಪ್ರಾಯಪಟ್ಟರು. ಕಾಂಗ್ರೆಸ್‌ ವಕ್ತಾರ ಬಿಪಿನ್‌ಚಂದ್ರ ಪಾಲ್ ನಕ್ರೆ ಮಾತನಾಡಿ, ನಿರಂಕುಶಮತಿಗಳ ಕೈಯಲ್ಲಿ ದೇಶವಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಪ್ರಸ್ತುತ ದೇಶದ ಜನತೆ ಜನತಂತ್ರದ ರಕ್ಷಣೆಗಾಗಿ ಕಾಂಗ್ರೆಸ್ಸಿನತ್ತ ನೋಡುತ್ತಿದ್ದಾರೆ ಎಂದರು.

ಡಿಸಿಸಿ ಸದಸ್ಯ ಶಿರಿಯಣ್ಣ ಶೆಟ್ಟಿ, ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ ಕುಕ್ಕುಂದೂರು ಉದಯ ಶೆಟ್ಟಿ, ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ತಾ.ಪಂ. ಸದಸ್ಯ ಸುಧಾಕರ ಶೆಟ್ಟಿ, ಕಾರ್ಯದರ್ಶಿ ಸದಾಶಿವ ದೇವಾಡಿಗ, ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಆರೀಫ್ ಕಲ್ಲೊಟ್ಟೆ, ಕುಕ್ಕುಂದೂರು ಗ್ರಾಮಾಧ್ಯಕ್ಷ ಥೋಮಸ್ ಮಸ್ಕರೇನಸ್, ಮಾಜಿ ಪುರಸಭಾ ಅಧ್ಯಕ್ಷ ಸುಭೀತ್ ಕುಮಾರ್, ಹಾಲಿ ಸದಸ್ಯರಾದ ಶುಭದಾ ರಾವ್, ಆಶ್ಪಕ್ ಅಹಮ್ಮದ್, ವಿನ್ನಿಬೋಲ್ಡ್, ಪ್ರತಿಮಾ ರೆಹಮತ್, ನವೀನ ದೇವಾಡಿಗ, ನಗರ ಮಹಿಳಾ ಅಧ್ಯಕ್ಷೆ ಕಾಂತಿ ಶೆಟ್ಟಿ, ನ್ಯಾಯವಾದಿಗಳಾದ ಶರೀಪ್‌, ರೆಹಮತುಲ್ಲ, ಕಾರ್ಯದರ್ಶಿ ಶೋಭಾ, ವಿವಿಧ ಗ್ರಾಮ ಪಂಚಾಯತ್‌ ಸದಸ್ಯರು, ಯುವ ಕಾಂಗ್ರೆಸ್ ನ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾಂಗ್ರೆಸ್‌ ಸೇವಾದಳದ ಅಧ್ಯಕ್ಷ ಸುಶಾಂತ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ನಿರೂಪಿಸಿ, ವಂದಿಸಿದರು.















































































































































error: Content is protected !!
Scroll to Top