ದಿಲ್ಲಿ, ಅ. 1 : ಈ ತಿಂಗಳಲ್ಲಿ ಬ್ಯಾಂಕು ವಹಿವಾಟು ನಡೆಸುವವರು ರಜೆಗಳ ಬಗ್ಗೆ ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಅಕ್ಟೋಬರ್ ಹಬ್ಬಗಳ ತಿಂಗಳಾಗಿರುವುದರಿಂದ ಬ್ಯಾಂಕ್ ಸೇರಿದಂತೆ ಸರಕಾರಿ ಕಚೇರಿಗಳಿಗೆ ಅನೇಕ ರಜೆಗಳಿರುತ್ತವೆ. ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿ ಈ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 14 ರಜೆಗಳಿವೆ.
ಎಲ್ಲ ಸರಕಾರಿ ರಜೆಗಳಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ. ಆದರೆ ಈ ತಿಂಗಳ 14 ರಜೆಗಳಲ್ಲಿ ಕೆಲವು ಪ್ರಾದೇಶಿಕ ರಜೆಗಳು ಇವೆ ಎಂದು ಆರ್‌ಬಿಐ ಹೇಳಿದೆ. ಪ್ರಾದೇಶಿಕ ರಜೆಗಳೆಂದರೆ ಆಯಾಯ ರಾಜ್ಯಗಳಿಗೆ ಸೀಮಿತವಾಗಿರುವ ರಜೆ.
ಅಕ್ಟೋಬರ್ ತಿಂಗಳ ಬ್ಯಾಂಕ್ ರಜೆಗಳ ವಿವರ ಹೀಗಿದೆ:

ಅ. 2, ಶುಕ್ರವಾರ – ಗಾಂಧಿ ಜಯಂತಿ
ಅ.4, ಭಾನುವಾರ
ಅ.8, ಗುರುವಾರ –ಚೆಲ್ಲಂ (ಪ್ರಾದೇಶಿಕ)
ಅ.10- ಎರಡನೇ ಶನಿವಾರ
ಅ.11-ಭಾನುವಾರ
ಅ.17 , ಶನಿವಾರ –ಕಟಿ ಬಿಹು (ಪ್ರಾದೇಶಿಕ)
ಅ.18- ಭಾನುವಾರ
ಅ.23,ಶುಕ್ರವಾರ- ಮಹಾಸಪ್ತಮಿ (ಪ್ರಾದೇಶಿಕ)
ಅ.24, ಶನಿವಾರ-ಮಹಾಶತಮಿ (ಪ್ರಾದೇಶಿಕ)
ಅ.25- ಭಾನುವಾರ
ಅ.26, ಸೋಮವಾರ- ವಿಜಯ ದಶಮಿ
ಅ.29, ಗುರುವಾರ –ಮಿಲಾದ್ ಇ ಷರೀಫ್ (ಪ್ರಾದೇಶಿಕ)
ಅ.30, ಶುಕ್ರವಾರ –ಈದ್ ಮಿಲಾದ್
ಅ.31, ಶನಿವಾರ – ವಾಲ್ಮೀಕಿ ಜಯಂತಿ (ಪ್ರಾದೇಶಿಕ)






























































