ಕಾರ್ಕಳ : ನೆರೆ ಪೀಡಿತ ಪ್ರದೇಶಕ್ಕೆ ಕಾರ್ಕಳ ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ. ಇಒ ಡಾ. ಮೇ. ಹರ್ಷ ಕೆ.ಬಿ. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂಡ್ಲಿ ಜಲಾಶಯ, ಎಣ್ಣೆಹೊಳೆ, ಇನ್ನಾ, ಸೂಡ ಪ್ರದೇಶಕ್ಕೆ ರವಿವಾರ ತಹಶೀಲ್ದಾರ್ ತಂಡ ಬೇಟಿ ನೀಡಿ ಮುನ್ನೆಚ್ಚರಿಕೆ ಕ್ರಮ ವಹಿಸಿತು.
ಮನೆ ಸಂಪೂರ್ಣ ಹಾನಿ
ಸೂಡ ಗ್ರಾಮದ ರಾಮಚಂದ್ರ ಭಟ್ ಅವರ ಮನೆ ಪಾಪನಾಶಿನಿ ನದಿಯ ಪ್ರವಾಹದಿಂದಾಗಿ ಪೂರ್ಣ ಹಾನಿಗೀಡಾಗಿದೆ. ಅವರ ಮನೆಗೆ ಭೇಟಿ ನೀಡಿದ ತಹಶೀಲ್ದಾರ್ ರಾಮಚಂದ್ರ ಭಟ್ ಅವರಿಗೆ ಸಾಂತ್ವನ ಹೇಳಿ, ಸರಕಾರದಿಂದ ದೊರೆಯುವ ಪರಿಹಾರವನ್ನು ಕೂಡಲೇ ಒದಗಿಸುವುದಾಗಿ ಭರವಸೆ ನೀಡಿದರು.

ಗಂಜಿ ಕೇಂದ್ರ
ಅಪಾಯಕಾರಿ ಸ್ಥಳದಲ್ಲಿದ್ದ ಇನ್ನಾದ 20 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಸೂಡ ಮಹಾಲಿಂಗೇಶ್ವರ ದೇಗುಲ ಹಾಗೂ ಮರ್ಣೆಯಲ್ಲಿ ಗಂಜಿ ಕೆಂದ್ರ ತೆರೆಯಲಾಯಿತು. ಜಿ.ಪಂ. ಸದಸ್ಯೆ ರೇಶ್ಮಾ ಉದಯ ಶೆಟ್ಟಿ, ಕಂದಾಯ ನಿರೀಕ್ಷಕ ರಿಯಾಜ್, ಗ್ರಾಮ ಕರಣಿಕ, ಸಹಾಯಕರು ಈ ಸಂದರ್ಭದಲ್ಲಿದ್ದರು.


























