ಮಾಳ ಘಾಟಿಯಲ್ಲಿ ಬೈಕ್‌ ಮೇಲೆ ಬಿದ್ದ ಮರ : ಯುವ ಮೋರ್ಚಾ ಕಾರ್ಯಕರ್ತರಿಂದ ಪರಿಹಾರ ಕಾರ್ಯಾಚರಣೆ

ಕಾರ್ಕಳ, ಸೆ. 20 : ಭಾರಿ ಮಳೆಯ ಕಾರಣ ಕುದುರೆಮುಖ ಮಾಳ ಘಾಟಿಯಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು ರಸ್ತೆಗೆ ಬಿದ್ದ ಮರವನ್ನು ಮತ್ತು ಮರದ ಅಡಿ ಸಿಲುಕಿದ್ದ ಬೈಕ್ ಅನ್ನು ಬಜಗೋಳಿ ಯುವಮೋರ್ಚಾ ತಂಡದ ಕಾರ್ಯಕರ್ತರು  ತೆರವುಗೊಳಿಸಿದರು.

ಬಜಗೋಳಿ ಬಿಜೆಪಿ ಯುವಮೋರ್ಚಾ ಶಕ್ತಿಕೇಂದ್ರದ ಅಧ್ಯಕ್ಷ ರಜತ್ ರಾಮ್ ಮೋಹನ್, ಪ್ರಧಾನ ಕಾರ್ಯದರ್ಶಿ ನಿಲೇಶ್ ತೆಂಡೂಲ್ಕರ್, ಅಕ್ಷತ್ ಮಾಳ, ಅನಿಶ್ ತೆಂಡೂಲ್ಕರ್ ಮತ್ತು ರತನ್ ಇವರು ಪರಿಹಾರ ಕಾರ್ಯಾಚರಣೆಗೆ ಕೈಜೋಡಿಸಿದರು.

ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಘಾಟಿಯಲ್ಲಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ. ಕುದುರೆಮುಖ, ಶೃಂಗೇರಿ  ಮಾರ್ಗವಾಗಿ ಚಲಿಸುವ ಪ್ರಯಾಣಿಕರು ಬದಲಿ ಮಾರ್ಗವನ್ನು  ಉಪಯೋಗಿಸುವುದು ಉತ್ತಮ ಎಂದು ಬಿಜೆಪಿ ಬಜಗೋಳಿ ಯುವಮೋರ್ಚಾ ಸಲಹೆ ಮಾಡಿದೆ.















































error: Content is protected !!
Scroll to Top