ಕಾರ್ಕಳ, ಸೆ. 20 : ಕರಾವಳಿ ಮತ್ತು ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮವಾಗಿ ಮಾಳ ಘಾಟಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ.
ಅಬ್ಬಾಸ್ ಕಟ್ಟಿಂಗ್ ಸಮೀಪ ಓಟೆಹಳ್ಳ ನದಿಯ ಬಳಿ ಗುಡ್ಡ ಜರಿದು ಸಂಚಾರ ಬಂದ್ ಆಗಿದೆ. ಹೀಗಾಗಿ ಶೃಂಗೇರಿ, ಕಳಸ, ಹೊರನಾಡುಗಳಿಗೆ ಹೋಗುವವರು ಪರ್ಯಾಯ ಮಾರ್ಗ ಬಳಸಬೇಕು. ಮಾಳ ಘಾಟಿಯಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಗುಡ್ಡ ಜರಿತಗಳು ಸಂಭವಿಸುತ್ತಿವೆ ಮತ್ತು ಮರಗಳು ರಸ್ತೆಗುರುಳಿವೆ.
























