ಕಾರ್ಕಳ, ಸೆ.18 : ಮಾಯದ ಸತ್ಯೊಳು ಎಂಬ ತುಳು ಭಕ್ತಿಗೀತೆಗಳ ಆಲ್ಬಂ ಅನ್ನು ಬ್ರಹ್ಮಶ್ರೀ ಮೊಗೇರ್ಕಳ ದೈವಸ್ಥಾನ ಕಾಬೆಟ್ಟು ಇಲ್ಲಿ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ಅಪ್ಪು ಮರ್ಣೆ ಅವರು ದೀ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಿಲ್ಲಾ ಮೊಗೇರ ಸಂಘದ ಉಪಾಧ್ಯಕ್ಷ ಹೊನ್ನಯ್ಯ, ತಾಲೂಕು ಪಂಚಾಯತ್ ಸದಸ್ಯ ಹಾಗೂ ಬ್ರಹ್ಮಶ್ರೀ ಮೊಗೇರ್ಕಳ ದೈವಸ್ಥಾನ ಕಾಬೆಟ್ಟು ಇದರ ಅಧ್ಯಕ್ಷ ಹರೀಶ್ಚಂದ್ರ, ಬ್ರಹ್ಮಶ್ರೀ ಮೊಗೇರ್ಕಳ ದೈವಸ್ಥಾನ ಕಾಬೆಟ್ಟು ಇದರ ಉಪಾಧ್ಯಕ್ಷ ಶೇಖರ್ ನಾಗೊಳ್ಳಿ, ಕ್ಷೇತ್ರದ ಗುರಿಕಾರ ಸುಂದರ್ ಉಪಸ್ಥಿತರಿದ್ದರು.
ಸುಧಾಕರ್ ಕಾಬೆಟ್ಟು ಸ್ವಾಗತಿಸಿ, ಸುಜಿತ್ ಎಸ್. ನಾರಾವಿ ವಂದಿಸಿದರು. ವಸಂತಿ ಕಡಂಬಳ ಕಾರ್ಯಕ್ರಮ ನಿರೂಪಿಸಿದರು. ಸುಜಿತ್ ಎಸ್. ನಾರಾವಿ ಸಾಹಿತ್ಯ ಒದಗಿಸಿರುವ ಭಕ್ತಿಗೀತೆಗಳನ್ನು ಸುರೇಶ್ ನಿಟ್ಟೆ ಮತ್ತು ವಸಂತಿ ಕಡಂಬಳ ಹಾಡಿದ್ದಾರೆ.








































































