ಯುವಕ ಮಂಡಲ ಸಾಣೂರು : ಹಗ್ಗ ಜಗ್ಗಾಟ ಸ್ಪರ್ಧೆ

ಕಾರ್ಕಳ, ಸೆ. 18: ಭಾರತ  ಸರಕಾರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ,  ನೆಹರು ಯುವ  ಕೇಂದ್ರ ಉಡುಪಿ ಮತ್ತು ಯುವಕ  ಮಂಡಲ ಸಾಣೂರು ಇದರ ಆಶ್ರಯದಲ್ಲಿ  ಫಿಟ್ ಇಂಡಿಯಾ ಸರಣಿ ಕಾರ್ಯಕ್ರಮ ಅಂಗವಾಗಿ ಸಾಣೂರು ಗ್ರಾಮದ ಯುವಕರಿಗೆ ಹಗ್ಗ ಜಗ್ಗಾಟ ಸ್ಪರ್ಧೆ

ಯುವಕ ಮಂಡಲದ ಮೈದಾನದಲ್ಲಿ  ನಡೆಯಿತು. ಬಹುಮಾನ ವಿತರಣಾ ಸಮಾರಂಭದ  ಅಧ್ಯಕ್ಷತೆ ವಹಿಸಿ  ಮಾತನಾಡಿದ ಮಂಡಲದ ಅಧ್ಯಕ್ಷ  ಪ್ರಸಾದ್ ಪೂಜಾರಿ   ಕ್ರೀಡಾ ಚಟುವಟಿಯಿಂದ ದೇಹ ಮತ್ತು ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ  ಎಂದರು. ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ,  ಮಾಜಿ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ, ಜಗದೀಶ್ ಕುಮಾರ್,  ಸದಸ್ಯರಾದ  ಶ್ರೇಯಸ್ ಶೆಟ್ಟಿ, ಚೇತನ್, ಹರೀಶ್ ರಾವ್, ರೋಹಿತ್, ರಾಜೇಶ್, ಚಂದ್ರಹಾಸ್ ಉಪಸ್ಥಿತರಿದ್ದರು. ಮಂಡಲದ  ಕಾರ್ಯದರ್ಶಿ ಮೋಹನ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಾಣೂರು ಗ್ರಾಮದ 6 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.  ಯುವಕ ಮಂಡಲ ಸಾಣೂರು  ಪ್ರಥಮ, ಯಂಗ್ ಸ್ಟಾರ್ ಬಟಾರಿ  ದ್ವಿತೀಯ ಬಹುಮಾನ ಪಡೆದುಕೊಂಡವು.































































































error: Content is protected !!
Scroll to Top