ಕಾರ್ಕಳ,ಸೆ. 18: : ಯುವವಾಹಿನಿ ಕಾರ್ಕಳ ಘಟಕ ಮತ್ತು ರೋಟರಿ ಆ್ಯನ್ಸ್ ಕ್ಲಬ್, ರೋಟರ್ಯಾಕ್ಟ್ ಕ್ಲಬ್ ಇವರ ವತಿಯಿಂದ ಪರಪ್ಪಾಡಿ ನಲ್ಲೂರಿನ ಎರಡು ಬಡ ಕುಟುಂಬಗಳಾದ ಮಮತಾ ದಿನೇಶ್ರವರ ಮನೆ ಹಾಗೂ ವನಿತಾ ಆನಂದರವರ ಮನೆಗೆ ಸೆ.18ರಂದು ಸೋಲಾರ್ ಲೈಟ್ ಅನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಗಣೇಶ್ ಸಾಲಿಯಾನ್, ಕಾರ್ಯದರ್ಶಿ ತಾರಾನಾಥ ಕೋಟ್ಯಾನ್, ರೋಟರಿ ಆ್ಯನ್ಸ್ ಸಂಸ್ಥೆಯ ಅಧ್ಯಕ್ಷ ರಮಿತಾ ಶೈಲೇಂದ್ರ ರಾವ್, ಪರಪ್ಪಾಡಿ ನಲ್ಲೂರು ಶಾಲೆಯ ಮುಖ್ಯಶಿಕ್ಷಕಿ ಪೂರ್ಣಿಮಾ ಶೆಣೈ, ರೋಟರ್ಯಾಕ್ಟ್ ಸದಸ್ಯ ಸಮೀರ್ ಹಾಗೂ ಕಾರ್ಕಳ ಯುವವಾಹಿನಿ ಘಟಕದ ಸ್ಥಾಪಕಾಧ್ಯಕ್ಷ ಸುಧಾಕರ್ ಪೂಜಾರಿ, ಉಪಾಧ್ಯಕ್ಷೆ ಮಮತಾ ಅಂಚನ್, ನಿರ್ದೇಶಕರಾದ ಅಶೋಕ್ ಸುವರ್ಣ, ಪ್ರಕಾಶ್ ಕೋಟ್ಯಾನ್, ಸಂದೇಶ್ ಕೋಟ್ಯಾನ್, ಸುರೇಂದ್ರ ಪತ್ತೊಂಜಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.































































