ಪ್ರಯಾಣಿಕರಿಗೆ ಬಳಕೆ ಶುಲ್ಕ ಬರೆ

ದಿಲ್ಲಿ, ಸೆ.18 :ಸದ್ಯದಲ್ಲೇ ರೈಲ್ವೇ ಟಿಕೆಟ್‌ ದರ ಕೂಡ ಏರಿಕೆಯಾಗುವ ಸಾಧ್ಯತೆಯಿದೆ. ರೈಲ್ವೇ ಕೆಲವು ಪ್ರಮುಖ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಂದ “ಬಳಕೆ ಶುಲ್ಕ” ವಸೂಲು ಮಾಡಲು ನಿರ್ಧರಿಸಿದೆ. ಇದರಿಂದಾಗಿ ಟಿಕೆಟ್‌ ದರ ಹೆಚ್ಚಾಗುವ ಸಾಧ್ಯತೆಯಿದೆ.

ರೈಲು ನಿಲ್ದಾಣಗಳ ಅಭಿವೃದ್ಧಿ ಮತ್ತು ಮೂಲ ಸೌಕರ್ಯಗಳ ಆಧುನೀಕರಣಕ್ಕಾಗಿ ಪ್ರಯಾಣಿಕರಿಂದ ಬಳಕೆ ಶುಲ್ಕ ವಸೂಲು ಮಾಡಲಾಗುವುದು. ವಿಮಾನ ಟಿಕಟ್‌ ಮಾದರಿಯಲ್ಲಿ ಈ ಶುಲ್ಕವನ್ನು ಟಿಕೆಟಿನ ದರದೊಂದಿಗೆ ಸೇರಿಸಿಕೊಳ್ಳಲಾಗುವುದು.

ಹಾಗೆಂದು ಇದು ದೊಡ್ಡ ಮೊತ್ತವಲ್ಲ. ಈಗಾಗಲೇ ಅಭಿವೃದ್ಧಿಯಾಗುತ್ತಿರುವ ಹಾಗೂ ಆಭಿವೃದ್ಧಿಯಾಗಬೇಕಾದ ಕೆಲವು ಪ್ರಮುಖ ನಿಲ್ದಾಣಗಳಿಗೆ ಮಾತ್ರ ಈ ಶುಲ್ಕ ಹಾಕಲಾಗುವುದು ಎಂದು ರೈಲ್ವೇ ಮೂಲವೊಂದು ತಿಳಿಸಿದೆ.





























































































































error: Content is protected !!
Scroll to Top