ಕೃಷಿ ಮಸೂದೆಗಳಿಗೆ ಲೋಕಸಭೆ ಮಂಜೂರಾತಿ

ದಿಲ್ಲಿ, ಸೆ. 18 : ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ವಿವಾದಾತ್ಮಕ ಕೃಷಿ ಸೇವೆಗಳು ಮತ್ತು ರೈತರ ಬೆಳೆಗಳಿಗಳಿಗೆ ಸೂಕ್ತ ಬೆಲೆ ನೀಡುವ (ಅಭಿವೃದ್ಧಿ ಮತ್ತು ರಕ್ಷಣೆ) ಮಸೂದೆ ಮತ್ತು ರೈತರು ಉತ್ಪಾದಿಸಿದ ವಸ್ತುಗಳು ಮತ್ತು ಮಾರಾಟ (ಉತ್ತೇಜನ ಅನುಕೂಲ) ಮಸೂದೆಗಳು ಲೋಕಸಭೆಯಲ್ಲಿ ಧ್ವನಿಮತದಿಂದ ಮಂಜೂರಾಗಿವೆ.ಅಗತ್ಯ ವಸ್ತುಗಳ (ತಿದ್ದಪಡಿ) ಮಸೂದೆ ಈಗಾಗಲೇ ಮಂಜೂರಾಗಿದೆ.  

ಈ ಕೃಷಿ ಮಸೂದೆಗಳನ್ನು ವಿರೋಧಿಸಿ ಎನ್ ಡಿಎ ಕೂಟದ ಮಿತ್ರಪಕ್ಷವಾದ  ಶಿರೋಮಣಿ ಅಕಾಲಿದಳದ ನಾಯಕಿ ಹಾಗೂ ಕೇಂದ್ರ ಆಹಾರ ಸಂಸ್ಕರಣಾ ಖಾತೆ ಸಚಿವೆ ಹರ್‌ಸಿಮ್ರತ್‌ ಕೌರ್‌ ನಿನ್ನೆ ರಾಜೀನಾಮಿ ನೀಡಿದ್ದಾರೆ. ಕೃಷಿ ರಾಜ್ಯವಾಗಿರುವ ಪಂಜಾಬಿನಲ್ಲಿ ಮೂರು ಕೃಷಿ ಮಸೂದೆಗಳಿಗೆ ಭಾರಿ ವಿರೋಧ ವ್ಯಕ್ತವಾಗಿದೆ.

ಇದೀಗ ಮೇಲ್ಮನೆಯಲ್ಲಿ ಈ ಮಸೂದೆಗಳು ಮಂಡನೆಯಾಗಲಿದ್ದು, ಅಲ್ಲೂ ಅನುಮೋದನೆ ಸಿಕ್ಕಿದರೆ ಕಾನೂನು ಆಗಿ ಜಾರಿಗೆ ಬರಲಿವೆ.ಕಾಂಗ್ರೆಸ್‌ ಸಹಿತ ಎಲ್ಲ ವಿಪಕ್ಷಗಳು ಇದು ರೈತ ವಿರೋಧಿ ಮಸೂದೆ ಎಂದು ಹೇಳಿ ಪ್ರತಿಭಟಿಸುತ್ತಿವೆ.

ಆದರೆ ಸರಕಾರ ಕೃಷಿ ಮೂಲಸೌಕರ್ಯಗಳಲ್ಲಿ  ಖಾಸಗಿ ವಲಯದವರು ಹೂಡಿಕೆ ಮಾಡುವುದರಿಂದ ಕೃಷಿ ಕ್ಷೇತ್ರದ ಅಭಿವೃದ್ಧಿಯಾಗಲಿದೆ ಎಂದು ಮಸೂದೆಗಳನ್ನು ಸಮರ್ಥಿಸಿಕೊಂಡಿದೆ.   

ರಾಜ್ಯಗಳ ಎಪಿಎಂಸಿ ಮಾರುಕಟ್ಟೆ ಕಾಯಿದೆಗಳನ್ನು ಈ ಕೃಷಿ ಮಸೂದೆಗಳು ನುಂಗಿ ಹಾಕುವುದಿಲ್ಲ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಭರವಸೆ ನೀಡಿದ್ದಾರೆ.









































































































error: Content is protected !!
Scroll to Top