ಹಿಂದಿಯಲ್ಲಿರುವ ಆರ್ ಸಿಬಿ ಥೀಮ್‌ ಸಾಂಗ್ ಗೆ ಅಭಿಮಾನಿಗಳು ಗರಂ

ಬೆಂಗಳೂರು, ಸೆ. 18 : ಐಪಿಎಲ್ ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಿರ್ವಹಣೆ  ಎಷ್ಟೇ  ಕಳಪೆಯಾಗಿದ್ದರೂ ಅಭಿಮಾನಿಗಳಿಗೆ ಆ ತಂಡದ ಮೇಲೆ ಇನ್ನೂ ಅದೇನೋ ಅಭಿಮಾನ ಇದೆ. ಫಲಿತಾಂಶ ಏನೇ ಇದ್ದರೂ ಅಭಿಮಾನಿಗಳು ರಾಯಲ್‌ ಚಾಲೆಂಜರ್ಸ್‌ ಪಂದ್ಯಗಳನ್ನು ನೋಡುವುದನ್ನು ಮಾತ್ರ ತಪ್ಪಿಸುವುದಿಲ್ಲ.  ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಇದ್ದರಂತೂ ಇಡೀ ಸ್ಟೇಡಿಯಂ ಕೆಂಪಿನಿಂದ ಕಂಗೊಳಿಸುತ್ತದೆ.

ಆದರೆ ಇದೇ ಮಾತನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿನ ಈ ಸಲದ ಥೀಮ್‌ ಸಾಂಗ್‌ ಬಗ್ಗೆ ಹೇಳುವಂತಿಲ್ಲ. ಹಿಂದಿಯಲ್ಲಿರುವ ಈ ಥೀಮ್‌ ಸಾಂಗ್‌ ಬಗ್ಗೆ ಹಲವು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿ ಮತ್ತು ಮತ್ತು ಇಂಗ್ಲೀಷ್‌ ಬದಲಾಗಿ ಕನ್ನಡದಲ್ಲಿ ಥೀಮ್‌ ಸಾಂಗ್‌ ಇರಬೇಕಿತ್ತು ಎಂದು ಹೆಚ್ಚಿನವರು ಹೇಳಿದ್ದಾರೆ.

ಕನಿಷ್ಠ ಕನ್ನಡದ ಕೆಲವು ಸಾಲುಗಳಾದರೂ ಬೇಕಿತ್ತು ಎನ್ನುವುದು ಅಭೀಮಾನಿಗಳ ಅಭಿಪ್ರಾಯ.

ಬೆಂಗಳೂರಿನ ತಂಡವಾಗಿ ಕನ್ನಡವನ್ನು ಕಡೆಗಣಿಸಿರುವುದಕ್ಕೆ ಆಕ್ರೋಶವೂ ವ್ಯಕ್ತವಾಗಿದೆ.

ಶುಕ್ರವಾರ ಆರ್‌ಸಿಬಿ ಹೊಸ ಥೀಮ್‌ ಸಾಂಗ್‌ ಅನ್ನು ಬಿಡುಗಡೆಗೊಳಿಸಿದೆ.ಶನಿವಾರದಿಂದ ಅಬುಧಾಬಿಯಲ್ಲಿ ಐಪಿಎಲ್‌ ಪಂದ್ಯಗಳು ಆರಂಭವಾಗಲಿವೆ.   

ಮಾಜಿ ಕ್ರಿಕೆಟಿಗ  ದೊಡ್ಡ ಗಣೇಶ್‌ ಥಿಮ್‌ ಸಾಂಗ್‌ ಏನೋ ಚೆನ್ನಾಗಿದೆ ಆದರೆ ಹಿಂದಿ ಬದಲು ಕನ್ನಡದಲ್ಲಿದ್ದರೆ ಒಳ್ಳೆಯದಿತ್ತು  ಎಂದು ಟ್ವೀಟ್‌ ಮಾಡಿದ್ದಾರೆ.

ಇಡೀ ಕರ್ನಾಟಕ ಈಗ ಹಿಂದಿ ಹೇರಿಕೆ ವಿರುದ್ಧ ಹೋರಾಡುತ್ತಿದೆ. ಹೀಗಿರುವಾಗ ಬೆಂಗಳೂರಿನ ಹೆಸರಿನಲ್ಲಿರುವ ಕ್ರಿಕೆಟ್‌ ತಂಡ ಹಿಂದಿಯಲ್ಲಿ ಥೀಮ್‌ ಸಾಂಗ್‌ ಬಿಡುಗಡ ಮಾಡಿರುವುದು ಕಿರಿಕಿರಿಯುಂಟು ಮಾಡುತ್ತಿದೆ ಎಂದು ಹರೀಶ್‌  ಎಸ್.‌ ಇಟಗಿ ಎಂಬವರು ಟ್ವೀಟ್‌ ಮಾಡಿದ್ದಾರೆ.  

ತಮಿಳುನಾಡು ತಂಡ ತಮಿಳು ಬಳಸುತ್ತದೆ, ಪಂಜಾಬ್‌ ತಂಡ ಪಂಜಾಬಿ ಬಳಸುತ್ತದೆ. ಆದರೆ ಕನ್ನಡನಾಡಿನ ತಂಡ ಹಿಂದಿ ಬಳಸುತ್ತದೆ. ನಿಮಗೆ ಈ ಜನ್ಮದಲ್ಲಿ ಬುದ್ಧಿ  ಬರೋದಿಲ್ಲ ಎಂದು ತೇಜಸ್ವಿ ಕನ್ನಡಿಗ ಎಂಬವರು ಟ್ವೀಟ್‌ ಮಾಡಿದ್ದಾರೆ. ಕೆಲವರು ಥೀಮ್‌ ಸಾಂಗ್‌ ಬದಲಾಯಿಅಉವಂತೆ ಒತ್ತಾಯಿಸಿದ್ದಾರೆ.









































































































error: Content is protected !!
Scroll to Top