ನಟ ಜಾಕಿ ಶ್ರಾಫ್ ಅವರ ಅಸಲಿ ಹೆಸರು ಜೈ ಕಿಶನ್ ದಾದಾ. ಮುಂಬಯಿಯ ವಾಲ್ಕೇಶ್ವರದ ನಿವಾಸಿ. ಬಡತನದ ಪರಿಚಯ ಚೆನ್ನಾಗಿತ್ತು.ಅಣ್ಣ ಆಕಸ್ಮಿಕವಾಗಿ ಸಾವನ್ನಪ್ಪಿದ್ದರು.ತಂದೆ ಜ್ಯೋತಿಷಿ.ಒಂದು ದಿನ ಬಸ್ ಸ್ಟಾಪ್ ನಲ್ಲಿ ನಿಂತಿದ್ದಾಗ ಒಬ್ಬ ಯುವಕ ಎದುರಾದ. ಚಾರ್ ಮಿನಾರ್ ಸಿಗರೇಟ್ನ ಜಾಹೀರಾತಿನಲ್ಲಿ ನಟಿಸುವಂತೆ ಕೇಳಿಕೊಂಡ. ಹಣದ ಅವಶ್ಯಕತೆ ಇತ್ತು. ಆದ್ದರಿಂದ ಒಪ್ಪಿಕೊಂಡರು.
ದೇವಾನಂದ್ರ “ಸ್ವಾಮಿ ದಾದಾ” ಚಿತ್ರದಲ್ಲಿ ಖಳನ ಪುಟ್ಟ ಪಾತ್ರವನ್ನು ನಿಭಾಯಿಸುವ ಅವಕಾಶ ಜಾಕಿಗೆ ಲಭಿಸಿತು.1983ರಲ್ಲಿ ಸುಭಾಷ್ ಘಾಯ್ ತಮ್ಮ ” ಹೀರೋ ” ಚಿತ್ರಕ್ಕಾಗಿ ಹೊಸ ಹೀರೋನ ಹುಡುಕಾಟದಲ್ಲಿ ದ್ದರು.ಯಾರೋ ಜಾಕಿಯ ಹೆಸರನ್ನು ಘಾಯ್ ಗೆ ಸೂಚಿಸಿದರು. ಜಾಕಿಗೆ ‘ಹೀರೋ’ ದಲ್ಲಿ ಹೀರೋ ಆಗುವ ಅವಕಾಶ ಲಭಿಸಿತು.(ಕನ್ನಡದಲ್ಲಿ ‘ರಣಧೀರ’ವಾಗಿ ಈ ಚಿತ್ರ ರೀಮೇಕ್ ಆಗಿತ್ತು).ಮೀನಾಕ್ಷಿ ಶೇಷಾದ್ರಿಗೂ ಈ ಚಿತ್ರ ಸ್ಟಾರ್ ಪಟ್ಟ ಒದಗಿಸಿ ಕೊಟ್ಟಿತು.ಪಾಕ್ ಗಾಯಕಿ ರೇಶ್ಮಾ (ಸಿತಾರ ಎ ಇಮ್ತಿಯಾಝ್) ಮೊದಲ ಬಾರಿಗೆ ಈ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. “ಲಂಬೀ ಜುದಾಯಿ… ” ಆಕೆ ಹಾಡಿರುವ ಹಾಡು.2013ರ ನವೆಂಬರ್ ನಲ್ಲಿ ಗಂಟಲು ಕ್ಯಾನ್ಸರ್ ನಿಂದಾಗಿ ಆಕೆ ನಿಧನ ಹೊಂದಿದರು.
ವಾಲ್ಕೇಶ್ವರ ಮತ್ತು ಆಸುಪಾಸಿನ ಎಲ್ಲಾ ರಸ್ತೆ ಬದಿ ಜೋಪಡಾದ ಬಡ ಮಕ್ಕಳ ಬಳಿ ಜಾಕಿ ಶ್ರಾಫ್ ರ ಖಾಸಗಿ ಮೊಬೈಲ್ ನಂಬರ್ ಇದೆ.ದಿನದ 24 ಗಂಟೆಯೂ ಸಹಾಯಕ್ಕಾಗಿ ಈ ನಂಬರಿಗೆ ಅವರು ಕರೆ ಮಾಡಬಹುದಾಗಿದೆ.ಭಾರತದಲ್ಲಿ ಇಂತಹ ಯಾವ ನಟರಿದ್ದಾರೆ ಹೇಳಿ.

ಏಳಿಂಜೆ ನಾಗೇಶ್- 98929 80750






































