ಕನಾ೯ಟಕದ ಮಟ್ಟಿಗೆ ಪ್ರಾದೇಶಿಕ ಪಕ್ಷ ಕಟ್ಟುವವರು ಗಂಭೀರವಾಗಿ ಆಲೋಚಿಸಬೇಕಾದ ಹಲವು ವಿಚಾರಗಳ ಬಗ್ಗೆ ಚಿಂತನೆ ನಡೆಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ.
ಕನಾ೯ಟಕದಲ್ಲಿ ಪ್ರಾದೇಶಿಕ ಪಕ್ಷ ಹುಟ್ಟು ಹಾಕುವವರ ತಲೆಗೆ ಮೊದಲು ಸುಳಿಯುವುದು ಆಂಧ್ರಪ್ರದೇಶ,ತಮಿಳುನಾಡು, ದಿಲ್ಲಿ ಹಾಗೂ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ತಲೆ ಎತ್ತಿ ಬಂದಿರುವ ಪ್ರಾದೇಶಿಕ ಪಕ್ಷಗಳು.ಈ ಎಲ್ಲ ಉದಾಹರಣೆಗಳನ್ನು ಇಟ್ಟುಕೊಂಡು ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿ ಯಶಸ್ಸು ಕಾಣಲು ಸಾಧ್ಯವೇ ಅನ್ನುವುದು ನಮ್ಮ ಮುಂದಿರುವ ಬಹು ದೊಡ್ಡ ಪ್ರಶ್ನೆ.
ಮೊದಲಾಗಿ ನಾವು ಗಮನ ಹರಿಸಬೇಕಾದದ್ದು ಬೇರೆ ರಾಜ್ಯ ಗಳ ಸ್ಥಿತಿಗತಿಯನ್ನು ಇಟ್ಟುಕೊಂಡು ಕರ್ನಾಟಕದಲ್ಲಿ ಪಕ್ಷ ಕಟ್ಟಲು ಯಾಕೆ ಸಾಧ್ಯವಿಲ್ಲ ಎಂಬುದರತ್ತ. ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಪೂರಕವಾದ ವಾತಾವರಣವಿಲ್ಲವೇ?ಹಾಗಾದರೆ ಪೂರಕವಾದ ವಾತಾವರಣವೆಂದರೇನು? ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಚಚಿ೯ಸಬೇಕಾಗಿದೆ.

ಭಾರತದ ರಾಜಕೀಯ ಪಕ್ಷಗಳ ಹುಟ್ಟು ಮತ್ತು ಬೆಳವಣಿಗೆಯ ಇತಿಹಾಸವನ್ನುಆವಲೋಕಿಸಿದಾಗ ಕಂಡು ಬರುವ ಸತ್ಯಾಂಶವೆಂದರೆ ಕಾಂಗ್ರೆಸ್ ಅನ್ನು ರಾಷ್ಟ್ರೀಯ ಪಕ್ಷ ವನ್ನಾಗಿ ಮೊದಲು ಸ್ವೀಕರಿಸಿದ ದೇಶವಿದು. ಮೊದಲ ಕಾಲಘಟ್ಟದಲ್ಲಿ ಕೆಲವೊಂದು ಪಕ್ಷಗಳು ವ್ಯಕ್ತಿಗತ ವಚ೯ಸ್ಸು, ಸಿದ್ಧಾಂತಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಪಯಾ೯ಯ ಪಕ್ಷಗಳಾಗಿ ಬೆಳೆಯುವ ಪ್ರಯತ್ನ ಮಾಡಿದವು.ಆದರೆ ಅವುಗಳು ನಿರೀಕ್ಷಿತ ಮಟ್ಟಕ್ಕೆ ಏರಲು ಸಾಧ್ಯ ವಾಗಲಿಲ್ಲ.ಉದಾ:ಕಮ್ಯುನಿಸ್ಟ್ ಪಕ್ಷ , ಜನ ಸಂಘ.
ಸುಮಾರು 70-80ರ ದಶಕದಲ್ಲಿ ಕಾಂಗ್ರೆಸ್ ನಿಧಾನವಾಗಿ ತನ್ನ ಹಿಡಿತ ಕಳೆದುಕೊಳ್ಳುವ ಸಂದಭ೯ದಲ್ಲಿ ಭಾರತೀಯ ಜನತಾ ಪಕ್ಷ ತನ್ನ ಹುಟ್ಟನ್ನು ಮರುಸ್ಥಾಪನೆ ಮಾಡಿ ಕೊಂಡು ವಷ೯ದಿಂದ ವಷ೯ಕ್ಕೆ ತನ್ನ ಪರಿಧಿಯನ್ನು ವೃದ್ಧಿಸುತ್ತಾ ಇಂದು ಬಹು ಸುದೃಢ ರಾಷ್ಟ್ರ ಮಟ್ಟದ ಪಕ್ಷವಾಗಿ ಬೆಳೆದು ನಿಂತಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಪಕ್ಷಗಳ ಉಗಮಕ್ಕೆ ಕಾರಣಗಳೇನು?
1.ರಾಷ್ಟ್ರೀಯ ಪಕ್ಷಗಳಿಂದ ಸರಿಸಮಾನವಾದ ಆಥಿ೯ಕ, ರಾಜಕೀಯ, ಸಾಮಾಜಿಕ ನ್ಯಾಯ ಸಿಗದೇ ಇದ್ದ ಸಂದರ್ಭದಲ್ಲಿ ಸ್ಥಳೀಯ ವಿಚಾರಗಳನ್ನು ಮುನ್ನಲೆಗೆ ತಂದು ಪ್ರಬಲವಾದ ನಾಯಕತ್ವದಲ್ಲಿ ಪ್ರಾದೇಶಿಕ ವಿಚಾರಗಳಾದ ನೆಲ, ಜಲ, ಭಾಷೆ, ಅಭಿವೃದ್ಧಿ ಪರ ವಿಚಾರಗಳನ್ನು ಪ್ರಧಾನ ಪ್ರಣಾಳಿಕೆಯಾಗಿ ಜನರ ಒಲವು ಗಳಿಸಿಕೊಳ್ಳುವುದರಲ್ಲಿ ಸಫಲತೆ ಪಡೆದುಕೊಂಡವು.
2.ಆಂಧ್ರ, ತಮಿಳುನಾಡಿನಂತಹ ರಾಜ್ಯ ಸಿನಿಮೀಯ ಪ್ರಭಾವದ ಮೂಲಕ ಸಿನಿ ನಾಯಕರುಗಳು ಮತದಾರರ ಮನಸ್ಸಿಗೆ ನಿಜವಾದ ರಾಜಕೀಯ ಹೀರೊಗಳಾಗಿ ಹೊರ ಹೊಮ್ಮಿದರು.ಇವರುಗಳೇ ಅಲ್ಲಿನ ರಾಜಕೀಯದ ಆರಾಧ್ಯ ದೇವರುಗಳಾದರು.ಇದು ಇನ್ನೂ ಹೆಚ್ಚು ಕಾಲ ಮುಂದುವರಿಯುವುದು ಕಷ್ಟವಾಗಬಹುದು ಅನ್ನುವುದು ಇನ್ನೊಂದು ಬಹು ಮುಖ್ಯ ಬೆಳವಣಿಗೆ. ಉದಾ:ಆಂಧ್ರಪ್ರದೇಶ.ಇದು ನಿಧಾನವಾಗಿ ತಮಿಳುನಾಡಿಗೂ ವಿಸ್ತಾರವಾದರೂ ಆಶ್ಚರ್ಯವಿಲ್ಲ.
3.ಕಾಂಗ್ರೆಸ್ ನೆಲೆಕಂಡಿರುವ ರಾಜ್ಯಗಳಲ್ಲಿ ಅದರ ಹಿಡಿತ ಸಡಿಲಾಗುತ್ತಾ ಬಂದಾಗ ಪ್ರಾದೇಶಿಕ ಪಕ್ಷಗಳು ನೆಲೆ ಕಾಣಲು ದಾರಿ ಸೃಷ್ಟಿಯಾಯಿತು.ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ ಇತ್ಯಾದಿ .
ಕನಾ೯ಟಕದಲ್ಲಿ ಪ್ರಾದೇಶಿಕ ಪಕ್ಷ ಯಾಕೆ ನೆಲೆ ಕಾಣಲು ಸಾಧ್ಯ ವಾಗಿಲ್ಲ?
1.ರಾಷ್ಟ್ರೀಯ ಪಕ್ಷ ಗಳು ಗಟ್ಟಿಯಾಗಿ ನೆಲೆ ನಿಂತಿರುವ ರಾಜ್ಯಗಳಲ್ಲಿ ನಮ್ಮ ರಾಜ್ಯ ಪ್ರಮುಖವಾದ ಸ್ಥಾನ ಪಡೆಯುತ್ತದೆ.
2.ರಾಷ್ಟ್ರೀಯ ಪಕ್ಷಗಳೂ ಭದ್ರವಾಗಿ ಬೇರೂರಿರುವುದು ಕೂಡಾ ರಾಜ್ಯದ ಪ್ರಮುಖ ಜಾತಿ ನಾಯಕತ್ವದ ತಳಹದಿಯ ಮೇಲೆ.ಹಾಗಾಗಿ ಪಕ್ಷ ಮತ್ತು ಜಾತಿ ಸಮೀಕರಣ ಕರ್ನಾಟಕ ರಾಜಕೀಯದಲ್ಲಿ ಎದ್ದು ಕಾಣುವ ಲಕ್ಷಣವೂ ಹೌದು.
3.ನೆಲ, ಜಲ, ಭಾಷೆ ಅನ್ನುವುದು ಕೆಲವೇ ಗಡಿ ಜಿಲ್ಲೆಗಳ ಸಮಸ್ಯೆ ಹೊರತು ಸಮಗ್ರ ರಾಜ್ಯದ ರಾಜಕೀಯ ಸಮಸ್ಯೆಯಾಗಿ ಕೂಗು ಕೇಳಿ ಬರಲೇ ಇಲ್ಲ.
4.ಇನ್ನೊಂದು ನಮ್ಮ ರಾಜ್ಯದ ವಿಶೇಷತೆ ಅಂದರೆ ಜಿಲ್ಲೆಗೂ ರಾಜಕೀಯ ಪ್ರಭಾವಳಿ ಭಿನ್ನತೆಯನ್ನು ಪಡೆದು ಕೊಂಡಿರುವುದು.ಕರಾವಳಿ ಜಿಲ್ಲೆಗಳಲ್ಲಿ ಜಾತಿಗಿಂತಲೂ ಧಮ೯ದ ವಿಚಾಗಳೇ ಚುನಾವಣಾ ಸಂದರ್ಭದಲ್ಲಿ ಮುನ್ನಲೆಗೆ ಬರುವುದು.ಅದೇ ಇನ್ನಿತರ ಜಿಲ್ಲೆಗಳಲ್ಲಿ ಜಾತಿ ಪ್ರಾಬಲ್ಯವೇ ಗಣನೆಗೆ ಸಿಗುವುದು.
5.ಹಿಂದೆ ಕಾಂಗ್ರೆಸ್ ಬಲಾಡ್ಯವಿರುವಾಗ ಕೂಡಾ ಜಾತಿಯೇ ನಾಯಕತ್ವದ ವಾಹಿನಿಯಲ್ಲಿ ಎದ್ದು ಕಂಡಿದೆ.ಈಗಿನ ಬಿಜೆಪಿ ಸರಕಾರದಲ್ಲಿ ಕೂಡಾ ಜಾತಿ ಮೀರಿ ರಾಜಕೀಯ ಮೂಡಿಬರಲೇ ಇಲ್ಲ .ಇದು ಸಾಧ್ಯವೂ ಇಲ್ಲ.
6.ಹೊಸದಾಗಿ ಹುಟ್ಟಿಕೊಂಡ ಪಕ್ಷಗಳಿಗೂ ಕೂಡಾ ನಿರ್ದಿಷ್ಟವಾದ ವಿಚಾರಗಳು (issues) ತಮ್ಮಮುಂದೆ ಸಿಗದಾಗ ರಾಜಕೀಯದಲ್ಲಿ ಸದಾ ಬಳಸುವ ಹಳೆಯ ನಾಣ್ಯಗಳಾದ ಭ್ರಷ್ಟಾಚಾರ, ಜಾತ್ಯತೀತತೆ ಇಂತಹ ವಿಷಯಗಳೇ ಅಸ್ತ್ರವಾಗಿ ಹಿಡಿಯುವ ಅನಿವಾಯ೯ತೆ.ಈ ಎರಡು ವಿಷಯಗಳ ಮೇಲೆ ಜನರಿಗೆ ಭ್ರಮೆನಿರಸನವಾಗಿದೆ. 7.1998ರಲ್ಲಿ ಕನ್ನಡ ನಾಡು ಪಕ್ಷ ಹುಟ್ಟಿಕೊಂಡು ವಿಧಾನ ಸಭೆಯ 224 ಸ್ಥಾನಗಳಿಗೂ ಸ್ಪಧಿ೯ಸಿ ಎಲ್ಲಾ ಅಭ್ಯರ್ಥಿಗಳು ೨ ರಿಂದ 4 ಸಾವಿರ ಮತ ಪಡೆದ ಉದಾಹರಣೆ ನಮ್ಮಮುಂದಿದೆ.ಪಕ್ಷದ ಸಂಸ್ಥಾಪಕರದ್ದೇ ಪತ್ರಿಕೆ ಇತ್ತು.ಸಂಚಾರಕ್ಕೆ ವಾಹನಗಳಿದ್ದವು. ಆದರೂ ಒಂದೇ ಒಂದು ಕ್ಷೇತ್ರದಲ್ಲಿ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
8.ಯಡಿಯೂರಪ್ಪನವರ ಕೆಜೆಪಿ ಕೆಲವು ಸ್ಥಾನ ಗಳಿಸಲು ಸಾಧ್ಯವಾಗಿದ್ದು ಅವರ ಜಾತಿ ಬೆಂಬಲವೇ ಹೊರತು ಪ್ರಾದೇಶಿಕ ಪಕ್ಷ ಜನ ಬಯಸಿದ್ದಲ್ಲ ಅನ್ನುವುದು ಸತ್ಯ.ದೇವೇಗೌಡರ ಜೆಡಿಎಸ್ ಕೂಡಾ ಜಾತಿ ಪ್ರಾಬಲ್ಯದ ಮೇಲೆ ನಿಂತಿದೆ ಹೊರತು ಕರ್ನಾಟಕಕ್ಕೊಂದು ಪ್ರಾದೇಶಿಕ ಪಕ್ಷ ಬೇಕೆಂಬ ಕಾರಣಕ್ಕಾಗಿ ಅಲ್ಲ.
ಕರ್ನಾಟಕದ ಮಟ್ಟಿಗೆ ಪ್ರಾದೇಶಿಕ ಪಕ್ಷ ಹುಟ್ಟಿ ಕಣ್ಮರೆಯಾಯಾಗುವುದು ಸವೇ೯ಸಾಮಾನ್ಯ.ಸದ್ಯದ ಮಟ್ಟಿಗೆ ಕರ್ನಾಟಕಕ್ಕೊಂದು ಪ್ರಾದೇಶಿಕ ಪಕ್ಷ ಬೇಕು ಅನ್ನುವ ಮನ ಸ್ಥಿತಿ ಮತದಾರರಲಿ ಮೂಡಿಬಂದ ಲಕ್ಷಣವೇ ಕಾಣುವುದಿಲ್ಲ.ಆದುದರಿಂದ ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಗಳಿಗೆ ಭವಿಷ್ಯವಿದೆಯೇ? ಎಂಬ ಪ್ರಶ್ನೆ ಸ್ವಾಭಾವಿಕವಾಗಿ ಮೂಡಿಬರುತ್ತದೆ.
ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ, ಉಡುಪಿ (ರಾಜ್ಯಶಾಸ್ತ್ರ ಪ್ರಾಧ್ಯಾಪಕರು).









































